ಭಾನುವಾರದ ರಾಶಿಭವಿಷ್ಯ: ನಿಮ್ಮ ಗ್ರಹಬಲಗಳು ಹೀಗಿವೆ…

ಮೇಷ
ಭಾವುಕರಾಗಿ ವರ್ತಿಸಿ ವೃತ್ತಿಯ ಹಿತಾಸಕ್ತಿಗೆ ಧಕ್ಕೆ ತಂದುಕೊಳ್ಳುವಿರಿ. ಕೆಲವು ವಿಷಯಗಳಲ್ಲಿ ಅತಿ ಭಾವುಕತೆ ತ್ಯಜಿಸಿ ವಿವೇಕದಿಂದ ವರ್ತಿಸುವುದೊಳಿತು.

ವೃಷಭ
ಕೆಲವು ನಿರಾಶೆಯ ಕ್ಷಣಗಳನ್ನು ಎದುರಿಸುವಿರಿ. ನಿಮ್ಮ ಅಲಕ್ಷ್ಯವೇ ಅದಕ್ಕೆ ಕಾರಣವಾಗುತ್ತದೆ. ಸಣ್ಣ ವಿಷಯಕ್ಕೂ ನಿರ್ಲಕ್ಷ್ಯ ಮಾಡಬಾರದು.

ಮಿಥುನ
ಬಹಳಷ್ಟು ಮಾನಸಿಕ ಒತ್ತಡಕ್ಕೆ ಈಡಾಗುವಿರಿ. ಅದಕ್ಕೆ ಕಾರಣ ವೃತ್ತಿಯಲ್ಲಿನ ಏಳುಬೀಳುಗಳು. ಆರ್ಥಿಕ ಸಂಕಷ್ಟ ಕಾಡುವುದು.

ಕಟಕ
ನಕಾರಾತ್ಮಕ ಚಿಂತನೆ ತ್ಯಜಿಸಿ. ಬದುಕಿನ ಸಕಾರಾತ್ಮಕ ವಿಷಯಗಳನ್ನು ಗಮನಿಸಿ. ಕೌಟುಂಬಿಕ ಕಟ್ಟುಪಾಡುಗಳನ್ನು ಮೀರಿ ನಡೆಯದಿರಿ.

ಸಿಂಹ
ಆರ್ಥಿಕವಾಗಿ ರಿಸ್ಕ್ ತೆಗೆದುಕೊಳ್ಳಲು ಸಕಾಲವಲ್ಲ. ನೀವು ಬಯಸಿದ ಫಲ ಪಡೆಯಲಾರಿರಿ. ಹಣದ ವಿಷಯದಲ್ಲಿ ಎಚ್ಚರಿಕೆಯಿರಲಿ.

ಕನ್ಯಾ
ವೃತ್ತಿಯಲ್ಲಿ ಎಲ್ಲವೂ ಸುಗಮವಾಗಿ ಸಾಗುವುದು. ಕಾರ್ಯ ಸಾಫಲ್ಯ. ಆದರೆ ಮನೆಯಲ್ಲಿ  ಕಷ್ಟ ಎದುರಿಸುವಿರಿ. ಭಿನ್ನಾಭಿಪ್ರಾಯ.

ತುಲಾ
ಶುಭದಿನಗಳು ನಿಮಗೆ ಕಾದಿವೆ. ವೃತ್ತಿಯಲ್ಲಿ  ಏಳಿಗೆ ಕಾಣುವಿರಿ. ಹಲವರ ಮೆಚ್ಚುಗೆ ಗಳಿಸುವಿರಿ. ಆರ್ಥಿಕ ಪ್ರಗತಿ. ಬಾಕಿ ಇರುವ ಕಾರ್ಯ ಸಂಪೂರ್ಣ.

ವೃಶ್ಚಿಕ
ಕೆಲಸದ ಒತ್ತಡದ ಮಧ್ಯೆಯೂ ನಿಮ್ಮ ಆಪ್ತರನ್ನು ಭೇಟಿಯಾಗುವ ಅವಕಾಶ. ಅವರ ಸಂಗದಲ್ಲಿ  ಒತ್ತಡ ಮರೆಯುವಿರಿ

ಧನು
ಈವರೆಗೆ ಕಡೆಗಣಿಸಿದ ವಿಚಾರಕ್ಕೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಅದರಲ್ಲೇ ನಿಮ್ಮ ಪ್ರಗತಿ ಅಡಗಿದೆ. ಕುಟುಂಬಸ್ಥರ ಸಹಕಾರ ನಿಮಗಿದೆ. ಆರ್ಥಿಕ ಸುಧಾರಣೆ.

ಮಕರ
ಕೆರಿಯರ್‌ನಲ್ಲಿ ಏರುಪೇರು ಸಂಭವಿಸಬಹುದು. ಹಾಗೆಂದು ಹಿನ್ನಡೆಗಳಿಗೆ ಅಂಜುವ ಅಗತ್ಯವಿಲ್ಲ. ದಿನದಂತ್ಯಕ್ಕೆ ನಿಮಗೆ ಪೂರಕ ಬೆಳವಣಿಗೆ.

ಕುಂಭ
ಪ್ರೀತಿಯ ಆಕರ್ಷಣೆಗೆ ತುತ್ತಾಗುವ ಸಾಧ್ಯತೆಯಿದೆ. ಅದರ ಗುಂಗಿನಲ್ಲೆ ನಿಮ್ಮ ಕರ್ತವ್ಯವನ್ನು ಮರೆಯದಿರಿ. ಅದನ್ನೂ ಪೂರೈಸಿರಿ.

ಮೀನ
ನಿಮ್ಮ ಆಪ್ತರಿಗೆ ನೆರವು ನೀಡುವ ಪ್ರಸಂಗ ಒದಗಬಹುದು. ಅದು ನಿಷ್ಪಲವಾಗದು. ಕೌಟುಂಬಿಕ ಒತ್ತಡ ಹೆಚ್ಚಿದರೂ ಅದರಲ್ಲೇ ಸಂತೋಷ ಕಾಣುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!