ದಿನಭವಿಷ್ಯ| ಈ ರಾಶಿಯವರಿಗೆ ಇಂದು ಅತ್ಯಂತ ಶುಭದಿನ

ಮೇಷ
ಕೌಟುಂಬಿಕ ವಿಷಯಗಳಲ್ಲಿ ಇಂದು ಪೂರ್ಣ ವ್ಯಸ್ತರಾಗುವಿರಿ. ಸಣ್ಣಪುಟ್ಟ ವಾದ ನಡೆದರೂ ಅದನ್ನು ಅತಿರೇಕಕ್ಕೆ ಕೊಂಡೊಯ್ಯದಿರಿ.

ವೃಷಭ
ಸಣ್ಣ ಸಮಸ್ಯೆಯೂ ಹೆಚ್ಚಿನ ಉದ್ವಿಗ್ನತೆ ಸೃಷ್ಟಿಸಬಹುದು. ಸಮಾಧಾನಚಿತ್ತರಾಗಿ ಯೋಚಿಸುವ ಅಗತ್ಯವಿದೆ. ಆಪ್ತರ ಸಂಗದಲ್ಲಿ ನೆಮ್ಮದಿ.

ಮಿಥುನ
ಮನೆಯ ಕಾರ್ಯಗಳಲ್ಲಿ ಹೆಚ್ಚು ತೊಡಗುವಿರಿ. ಬಾಕಿ ಉಳಿದ ಕೆಲಸ ಪೂರೈಸಿರಿ. ಕೆಲವು ಖರೀದಿ ವ್ಯವಹಾರ ಹೆಚ್ಚು ಖರ್ಚಿಗೆ ಕಾರಣವಾಗುವುದು.

ಕಟಕ
ಕೆಲದಿನಗಳ ಉದ್ವಿಗ್ನತೆ, ಒತ್ತಡ ಇಂದು ತುಸು ನಿವಾರಣೆ ಆಗುವುದು. ಸಮಸ್ಯೆಗೆ ಪರಿಹಾರದ ದಾರಿ ತೋರುವುದು. ಇತರರ ನೆರವು ಲಭ್ಯವಾಗುವುದು.

ಸಿಂಹ
ದೊಡ್ಡ ಸಮಸ್ಯೆಗೆ ದೊಡ್ಡ ಪರಿಹಾರ ಬೇಕು. ಸಣ್ಣ ತೇಪೆ ಕೆಲಸ ಮಾಡಿ ಕೂರಬೇಡಿ. ಹಾಗೆ ಮಾಡಿದರೆ ಸಮಸ್ಯೆ ಮತ್ತಷ್ಟು ದೊಡ್ಡದೇ ಆಗಬಹುದು.

ಕನ್ಯಾ
ಕೌಟುಂಬಿಕ ಹೊಣೆಗಾರಿಕೆ ಹೆಚ್ಚು. ಕೆಲವರ ವರ್ತನೆ ನಿಮಗೆ ಅಸಹನೀಯ ಎನಿಸಬಹುದು. ಆದರೆ ಸಂಘರ್ಷಕ್ಕಿಂತ ಹೊಂದಾಣಿಕೆ ಲೇಸು.

ತುಲಾ
ಕೌಟುಂಬಿಕ ವಿಷಯವೊಂದು ಕ್ಲಿಷ್ಟಕರ ಪರಿಸ್ಥಿತಿ ಸೃಷ್ಟಿಸಬಹುದು. ಅದನ್ನು ನಾಜೂಕಿನಿಂದ ಪರಿಹರಿಸಿ. ಕೆಲವು ವದಂತಿ ನಂಬದಿರು ವುದೂ ಮುಖ್ಯ.

ವೃಶ್ಚಿಕ
ಸಣ್ಣ ಸಣ್ಣ ವಿಷಯಗಳು ಇಂದು ನಿಮ್ಮನ್ನು ಬಿಝಿಯಾಗಿಡುತ್ತವೆ. ಅವುಗಳನ್ನು ನಿಭಾಯಿಸುವುದರಲ್ಲೆ ದಿನ ಕಳೆಯುವುದು. ವಿರಾಮ ಸಿಗಲಾರದು.

ಧನು
ಸಮಸ್ಯೆಯೊಂದು ನಿಮ್ಮನ್ನು ಸುತ್ತುವರಿಯ ಬಹುದು. ಅದರಲ್ಲಿ ಪೂರ್ಣ ಸಿಕ್ಕಿ ಬೀಳುವಿರಿ. ಆದರೆ ಸಂಜೆ ವೇಳೆಗೆ ಸಮಸ್ಯೆ ಪರಿಹಾರ, ನಿರಾಳ ಮನೋಭಾವ.

ಮಕರ
ಹೆಚ್ಚುತ್ತಿರುವ ಕೆಲಸ, ಹೊಣೆಗಾರಿಕೆ ನಿಭಾಯಿಸಲು ಸೂಕ್ತ ನೆರವು ಸಿಗುವುದು. ಇದರಿಂದ ನಿಮ್ಮ ಒತ್ತಡ ಮಾಯ, ನಿರಾಳತೆ. ಬಂಧು ಭೇಟಿ.

ಕುಂಭ
ಅದೃಷ್ಟ ನಿಮ್ಮ ಜತೆಗಿದೆ. ಎಲ್ಲ ಕಾರ್ಯಗಳಲ್ಲಿ ಯಶಸ್ಸು. ಕಾಡುತ್ತಿದ್ದ ಚಿಂತೆ ಪರಿಹಾರ. ಬಂಧುವೊಬ್ಬರಿಂದ ಶುಭ ಸುದ್ದಿ ಸಿಗಬಹುದು. ಆರ್ಥಿಕ ಲಾಭ.

ಮೀನ
ಒತ್ತಡದ ಬದುಕಿಂದ ಇಂದು ಪರಿಹಾರ. ಕುಟುಂಬಸ್ಥರ ಜತೆ ಕಾಲ ಕಳೆಯುವ ಅವಕಾಶ. ನಿಮ್ಮ ಕಾರ್ಯವೊಂದು ಇಂದು ಉತ್ತಮ ಫಲ ನೀಡುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!