ದಿನಭವಿಷ್ಯ | ಈ ರಾಶಿಯವರಿಗೆ ಶುಭ ಯೋಗ ಹೊತ್ತು ತರಲಿದೆ ಭಾನುವಾರ!

ಮೇಷ
ಆರ್ಥಿಕ ಪರಿಸ್ಥಿತಿ ತುಸು ಚಿಂತೆಗೆ ಕಾರಣವಾದರೂ ಸಂಜೆ ವೇಳೆಗೆ ನಿಮಗೆ ನಿರಾಳತೆ ತರುವ ಬೆಳವಣಿಗೆ. ಬಂಧುಗಳಿಂದ ಶುಭ ಸುದ್ದಿ ಸಿಗಬಹುದು.

ವೃಷಭ
ಕೌಟುಂಬಿಕ ಭಿನ್ನಾಭಿಪ್ರಾಯ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಹೊಂದಾಣಿಕೆಯ ಬಾಳು ಉತ್ತಮ.

ಮಿಥುನ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ. ಅಲ್ಲಿ ನಿಮಗೆ ಹಿತಕರ ಎನಿಸುವ ಸುದ್ದಿ ಕೇಳಿಸೀತು. ಆರ್ಥಿಕ ಒತ್ತಡ ನಿವಾರಣೆ. ಕೌಟುಂಬಿಕ ನೆಮ್ಮದಿ.
ಕಟಕ

ಮನೆಯಲ್ಲಿ ಕಿರಿಕಿರಿ ಬಾಸಬಹುದು. ವಾಗ್ವಾದ ನಡೆದೀತು. ಸಹನೆಯಿಂದ ವರ್ತಿಸಿದರೆ ಎಲ್ಲವೂ ಸರಿಯಾಗುವುದು. ದುಡುಕದಿರಿ.

ಸಿಂಹ
ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ. ಬಾಯಿ ಚಪಲ ನಿಯಂತ್ರಿಸಿ. ಇಲ್ಲವಾದರೆ ಹೊಟ್ಟೆ ಕೆಡುವ ಸಂಭವವಿದೆ. ಆರ್ಥಿಕ ಒತ್ತಡ ಕಾಡಬಹುದು.

ಕನ್ಯಾ
ನೆರೆಕರೆಯ ಕೆಲವು ವಿಷಯಗಳು ಮನಸ್ಸಿನ ನೆಮ್ಮದಿ ಕೆಡಿಸ
ಬಹುದು. ಅದನ್ನು ಹೊಂದಾಣಿಕೆಯಿಂದ ಪರಿಹರಿಸಿ. ಸಂಘರ್ಷಕ್ಕೆ ಹೋಗದಿರಿ.

ತುಲಾ
ವ್ಯಕ್ತಿಯೊಬ್ಬರ ನಡೆನುಡಿ ನಿಮ್ಮ ಅಸಹನೆಗೆ ಕಾರಣವಾದೀತು. ಅವರೊಡನೆ ಜಗಳ ಮಾಡಲು ಹೋಗದಿರಿ. ದೂರವಿರುವುದೇ ನಿಮಗೆ ಒಳಿತು.

ವೃಶ್ಚಿಕ
ಇತರರ ವಿಷಯದಲ್ಲಿ ಮೂಗು ತೂರಿಸಲು ಹೋಗಬೇಡಿ. ಇತರರ ಜಗಳದಲ್ಲೂ ಮಧ್ಯಸ್ಥಿಕೆ ವಹಿಸಬೇಡಿ. ಅದರಿಂದ ನಿಮಗೆ ಹಾನಿಯಾಗುವ ಸಾಧ್ಯತೆಯೇ ಅಧಿಕ.

ಧನು
ಆಪ್ತ ಬಂಧುಗಳಿಂದ ಶುಭ ಸುದ್ದಿ. ಆಪ್ತೇಷ್ಟರ ಹಿತಾಸಕ್ತಿಗೆ ಹೆಚ್ಚು ಕಾಳಜಿ ವಹಿಸುವಿರಿ. ಕೌಟುಂಬಿಕ ಸಮಸ್ಯೆ ಬಾಧಿಸಿದರೂ ಅದು ನಿಮ್ಮ ನೆಮ್ಮದಿ ಕಲಕಲಾರದು.

ಮಕರ
ನೀವಿಂದು ಖರೀದಿಯ ಉತ್ಸಾಹ ತೋರುವಿರಿ. ಆದರೆ ಜೇಬಿನಲ್ಲಿರುವ ಹಣ ಹೆಚ್ಚು ಖರ್ಚಾಗದಂತೆ ನೋಡಿಕೊಳ್ಳಿ. ಮಿತವ್ಯಯ ಸಾಸಿರಿ.

ಕುಂಭ
ಖಾಸಗಿ ಬದುಕಿನಲ್ಲಿ ಭಾವನಾತ್ಮಕ ಏರುಪೇರು ಎದುರಿಸುವಿರಿ. ಆಪ್ತರ ವರ್ತನೆ ನಿಮಗೆ ನೋವು ತರಬಹುದು. ಮನಸ್ಸು ಗಟ್ಟಿಮಾಡಿಕೊಳ್ಳುವುದು ಅವಶ್ಯ.

ಮೀನ
ಕೆಲವು ವ್ಯಕ್ತಿಗಳು ನಿಮ್ಮ ಭಾವನೆ ಕೆದಕಬಹುದು. ಅತಿಯಾದ ಭಾವುಕತೆ ನಿಮಗೆ ನೋವನ್ನೇ ತರಬಹುದು. ಮನೋನಿಗ್ರಹ ಸಾಧಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!