ಅಂಡಮಾನ್ ದ್ವೀಪ ಪರಕೀಯರ ವಶವಾಗುವುದು ತಪ್ಪಿಸಲು ಹೋರಾಡಿದ ಧೀಮಂತ ನಾಯಕನೀತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಜಲೀಲ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬ್ಲೇರ್‌ನ ಅಬರ್ಡೀನ್ ಬಜಾರ್‌ನಲ್ಲಿ 15 ಫೆಬ್ರವರಿ 1910 ರಂದು ಜನಿಸಿದರು.
ಪೋರ್ಟ್ ಬ್ಲೇರ್‌ನಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದ ಅಬ್ದುಲ್ ಜಲೀಲ್ ಸ್ವಾತಂತ್ರ್ಯ ಚಳುವಳಿಯತ್ತ ಬಹುಬೇಗನೆ ಆಕರ್ಷಿತರಾದರು. ಬ್ರಿಟೀಷರ ವಿರುದ್ಧ ಸಂಘರ್ಷದಲ್ಲಿ ತೊಡಗಿದ್ದ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ (IIL)ನ ಸದಸ್ಯತ್ವವನ್ನು ಪಡೆದರು. (ಕ್ರಾಂತಿಕಾರಿ ನಾಯಕ ಮತ್ತು ಮಹಾನ್‌ ಸ್ವಾತಂತ್ರ್ಯ ಹೋರಾಟಗಾರ ರಾಶ್ ಬಿಹಾರಿ ಬೋಸ್ ಅವರು 1942 ರಲ್ಲಿ ಟೋಕಿಯೊದಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಅನ್ನು ಸ್ಥಾಪಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಪುಟಗಳಲ್ಲಿ ಈ ಸಂಘಟನೆಯ ಹೋರಾಟಗಳು ಮಹತ್ವದ್ದಾಗಿದೆ).
ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಅಂಡಮಾನ್ ದ್ವೀಪಗಳ ಮೇಲೆ ಜಪಾನಿಯರು ಆಕ್ರಮಣ ಮಾಡಿದಾಗ (1942-45) ಅವರ ವಿರುದ್ಧ ಹೋರಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್‌ಗೆ ದ್ವೀಪದ ನಿವಾಸಿಗಳು ಹಾಗೂ ನೆರೆಹೊರೆಯ ದೇಶಗಳಿಂದ ರಾಜಕೀಯ ಮತ್ತು ಆರ್ಥಿಕ ಬೆಂಬಲ ದೊರಕುವಂತೆ ಮಾಡಿದರು. ಇದರಿಂದ ಕ್ರೋಧಗೊಂಡ ಜಪಾನಿಯರು ಬೇಹುಗಾರಿಕೆ ಆರೋಪದ ಮೇಲೆ ಅಬ್ದುಲ್ ಜಲೀಲ್ ರನ್ನು ಅಕ್ಟೋಬರ್ 1943 ರಲ್ಲಿ ಬಂಧಿಸಿ ಸೆಲ್ಯುಲಾರ್ ಜೈಲಿನಲ್ಲಿ ಕೂಡಿಟ್ಟು ಚಿತ್ರಹಿಂಸೆ ನೀಡಿದರು. ಅಂತಿಮವಾಗಿ 30 ಜನವರಿ 1944 ರಂದು ಜಪಾನಿನ ಫೈರಿಂಗ್ ಸ್ಕ್ವಾಡ್‌ ಜಲೀಲ್‌ ಗೆ ಗುಂಡಿಕ್ಕಿ ಕೊಂದುಹಾಕಿತು. ಬಳಿಕ ಅವರನ್ನು ಹೋಮ್-ಫ್ರೇಗುಂಜ್‌ನಲ್ಲಿ ಸಮಾಧಿ ಮಾಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!