ದಿನಭವಿಷ್ಯ| ಬುಧವಾರದ ಈ ದಿನ ಹೇಗಿರಲಿದೆ ನಿಮ್ಮ ರಾಶಿಫಲ..

ಮೇಷ
ಇತರರ ಭಾವನೆಗಳಿಗೆ ಸ್ಪಂದಿಸುವಿರಿ. ಅವರ ಕಷ್ಟ ಪರಿಹಾರಕ್ಕೆ ಮುಂದಾಗುವಿರಿ.  ಕೌಟುಂಬಿಕ ಕಟ್ಟುಪಾಡು ನಿಮಗೆ ಅಸಹನೆ ಸೃಷ್ಟಿಸಬಹುದು.

ವೃಷಭ
ಅನಿರೀಕ್ಷಿತ ಬೆಳವಣಿಗೆ ಉಂಟಾದೀತು. ಅದರಿಂದ ಗಾಬರಿ ಯಾಗದಿರಿ. ಸರಿಯಾಗಿ ನಿಭಾಯಿಸಿದರೆ ಅದು ನಿಮಗೆ ಒಳ್ಳೆ ಫಲ ನೀಡಬಹುದು.

ಮಿಥುನ
ವೃತ್ತಿಗೆ ಸಂಬಂಧಿಸಿ ಇಂದು ಪ್ರಮುಖ ನಿರ್ಧಾರ ತಾಳದಿರಿ. ಅದು ನಿರೀಕ್ಷಿತ ಫಲ ನೀಡದು. ಸಂಗಾತಿ ಜತೆಗೆ ಅಭಿಪ್ರಾಯಭೇದ ಉಂಟಾದೀತು.

ಕಟಕ
ವೃತ್ತಿಪರ ಸಮಸ್ಯೆ ಯೊಂದು ಸಂಜೆ ವೇಳೆಗೆ ಪರಿಹಾರ ಕಾಣುವುದು. ಸಣ್ಣ ವಿಷಯಗಳಿಗೂ ಅತಿಯಾದ ಉದ್ವಿಗ್ನತೆ ಮಾಡಿಕೊಳ್ಳದಿರಿ. ಆರೋಗ್ಯಕ್ಕೆ ಅಹಿತಕರ.

ಸಿಂಹ
ಬಾಕಿ ಉಳಿದಿರುವ ಕಾರ್ಯ ಮುಗಿಸಲು ಆದ್ಯತೆ ಕೊಡಿ. ಆದರೆ ಯಾವುದೇ ಆತುರದ ತೀರ್ಮಾನ ಬೇಡ. ಅದರಿಂದ ಪ್ರತಿಕೂಲ ಪರಿಣಾಮವಾದೀತು.

ಕನ್ಯಾ
ಆಪ್ತರ ಜತೆಗಿನ ಭಿನ್ನಮತವನ್ನು ಸೌಹಾರ್ದದಿಂದ ಪರಿಹರಿಸಿ. ಇಲ್ಲವಾದರೆ ಮನಶ್ಯಾಂತಿ ಹಾಳು. ವಿರೋಧಿಗಳು ಇದರ ದುರ್ಲಾಭ ಪಡೆದಾರು.

ತುಲಾ
ಹಿಂದಿನ ಕಾರ್ಯ ವೊಂದು ಇಂದು ಉತ್ತಮ ಫಲ ನೀಡಬಹುದು. ಆತ್ಮೀಯರ ಜತೆಗಿನ ವಿರಸ ಶಮನ. ಆರ್ಥಿಕ ಚೇತರಿಕೆ.

ವೃಶ್ಚಿಕ
ಪ್ರಮುಖ ವಿಷಯದಲ್ಲಿ ಅನಿಶ್ಚಿತತೆ ನಿಮ್ಮನ್ನು ಕಾಡುತ್ತಿದೆ. ಅದನ್ನು ಬಹುಕಾಲ ಮುಂದುವರಿಸದಿರಿ. ಆದಷ್ಟು ಬೇಗ ಸೂಕ್ತ ನಿರ್ಧಾರ ತಾಳಬೇಕು.

ಧನು
ನಿಮ್ಮ ಜನಪ್ರಿಯತೆ ಇಂದು ಹೆಚ್ಚುವುದು. ಆರ್ಥಿಕ ಅಭಿವೃದ್ಧಿ. ಮಕ್ಕಳ ಮನಸ್ಸು ಅಧ್ಯಯನದಿಂದ ದೂರ ಸರಿಯದಂತೆ ನೋಡಿಕೊಳ್ಳಬೇಕು.

ಮಕರ
ಕೌಟುಂಬಿಕವಾಗಿ ಪೂರಕವಾದ ಬೆಳವಣಿಗೆ. ಕುಟುಂಬದಲ್ಲಿ ಹೊಸ ಸಂಬಂಧ ಕೂಡಿಬಂದೀತು. ವೃತ್ತಿಯಲ್ಲಿ  ಜನಪ್ರಿಯತೆ, ಆರ್ಥಿಕಾಭಿವೃದ್ಧಿ.

ಕುಂಭ
ವಾದದ ಸಂದರ್ಭದಲ್ಲಿ  ನಿಮ್ಮ ಕೋಪ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಇಲ್ಲವಾದರೆ ಪ್ರತಿಕೂಲವಾದೀತು. ಕೆಲ ವಿಷಯಗಳಲ್ಲಿ ಹೊಂದಾಣಿಕೆ ಅವಶ್ಯ.

ಮೀನ
ಏಕತಾನತೆಯ ಬದುಕು ನೀರಸ ಎನಿಸಬಹುದು. ಹೊಸತನಕ್ಕೆ ತುಡಿಯುವಿರಿ. ಪ್ರತಿಕೂಲ ಸನ್ನಿವೇಶದಲ್ಲೂ ಆಶಾವಾದ ಬಿಡದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!