ದಿನಭವಿಷ್ಯ | ಇಂದಿನ ದಿನ ಈ ರಾಶಿಯವರಿಗೆ ದೊಡ್ಡಹೊಣೆಗಾರಿಕೆಯೊಂದು ಜೊತೆಯಾಗಲಿದೆ

ಮೇಷ
ಕಾಲಮಿತಿಯಲ್ಲಿ ನಿಮ್ಮ ಕೆಲಸ ಪೂರೈಸುವಿರಿ. ಇದು ನಿಮಗೆ ನೆಮ್ಮದಿ ಒದಗಿಸುವುದು. ಕೌಟುಂಬಿಕ ಕಿರಿಕಿರಿಯೊಂದು ಪರಿಹಾರ ಕಾಣುವುದು.

ವೃಷಭ
ಸಮಸ್ಯೆ ಪರಿಹಾರಕ್ಕೆ ಸಾಕಷ್ಟು ಹಣ ವ್ಯಯಿಸುವಿರಿ.  ಆದರೂ ನಿಮಗೆ ತೃಪ್ತಿಕರ ಫಲಿತಾಂಶ ಮೂಡಿಬರದು. ದೇವರ ಪ್ರಾರ್ಥನೆ ಮಾಡಿ.

ಮಿಥುನ
ವೃತ್ತಿಯಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ವಿರೋಧಿಗಳ ಸ್ನೇಹ ಬೆಳೆಸುವಿರಿ. ಆರೋಗ್ಯ ಸಮಸ್ಯೆ ಪರಿಹಾರ. ಮನಸ್ಸಿಗೆ ನೆಮ್ಮದಿ.

ಕಟಕ
ದೊಡ್ಡ ಹೊಣೆಗಾರಿಕೆ ನಿಮ್ಮ ಮೇಲೆ ಬೀಳಲಿದೆ. ಆದರೆ ಅದನ್ನು ನಿಭಾಯಿಸಲು ನಿಮ್ಮಲ್ಲಿ ವಿಶ್ವಾಸದ ಕೊರತೆಯಿದೆ. ಅಂಜದಿರಿ, ಎಲ್ಲವೂ ಸುಗಮವಾಗುವುದು.

ಸಿಂಹ
ವೃತ್ತಿ ಬದುಕಿನಲ್ಲಿ ದೊಡ್ಡ ಸಾಧನೆ ಮಾಡುವಿರಿ. ಸಂಗಾತಿ ಜತೆಗಿನ ಭಿನ್ನಾಭಿಪ್ರಾಯ ನಿವಾರಿಸಲು ಸಕಾಲ. ಆರ್ಥಿಕ ಸ್ಥಿತಿ ಮೇಲೆ ಹಿಡಿತ ಸಾಸುವಿರಿ.

ಕನ್ಯಾ
ಸಣ್ಣಪುಟ್ಟ ವೈಫಲ್ಯಗಳಿಗೆ ಎದೆಗುಂದದಿರಿ. ದಿನದಂತ್ಯಕ್ಕೆ ಎಲ್ಲವೂ ನಿಮಗೆ ಪೂರಕವಾಗಿ ಸಾಗುವುದು. ಹಳೆಯ ಗೆಳೆಯರ ಭೇಟಿ ಸಂಭವ.

ತುಲಾ
ಪ್ರೀತಿಯ ವಿಷಯ ಮತ್ತು ನಿಮ್ಮ ಕೆರಿಯರ್‌ಗೆ ಸಂಬಂಸಿ ಪೂರಕ ಬೆಳವಣಿಗೆಗಳು. ಹಣದ ವಿಷಯದಲ್ಲೂ ಅದೃಷ್ಟ ನಿಮ್ಮೊಂದಿಗಿದೆ. ಒಟ್ಟಿನಲ್ಲಿ ಹಿತಕರ ದಿನ.

ವೃಶ್ಚಿಕ
ಹಳೆಯ ತಪ್ಪುಗಳನ್ನು ನೆನೆಸಿ ಕೊರಗುತ್ತಾ ಕೂರದಿರಿ. ಅದನ್ನು ತಿದ್ದಿಕೊಳ್ಳುವ ಅವಕಾಶ ಇನ್ನೂ ಇದೆ. ಆ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗಿ.ಆರ್ಥಿಕ ಸುಧಾರಣೆ.

ಧನು
ಇತರರಿಗೆ ಮುಜುಗರ ತರುವಂತಹ ಪ್ರಶ್ನೆ ಕೇಳದಿರಿ. ನಿಮ್ಮ ಕುತೂಹಲವನ್ನು ಪ್ರದರ್ಶಿಸಬೇಡಿ. ಗಾಳಿಮಾತುಗಳಿಗೆ ಕಿವಿಗೊಡದಿರಿ.

ಮಕರ
ಕೆಲಸದ ಮೇಲೆ ಹೆಚ್ಚು ಗಮನ ಕೊಡಿ. ನಿಮಗೆ ಅರಿವಿಲ್ಲದೇ ತಪ್ಪು ಘಟಿಸಬಹುದು. ವಿವಾಹಿತರಿಗೆ ಶುಭಸುದ್ದಿ ಸಿಗುವುದು. ಆರ್ಥಿಕ ಸ್ಥಿತಿ ಸುಧಾರಣೆ.

ಕುಂಭ
ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡದಿರಿ. ಕಷ್ಟಕ್ಕೆ ಸಿಲುಕುವಿರಿ. ಆರೋಗ್ಯ  ಸಮಸ್ಯೆ ಕಾಡಬಹುದು. ಕೌಟುಂಬಿಕ ಸಾಮರಸ್ಯಕ್ಕೆ ಧಕ್ಕೆ ಬಂದೀತು.

ಮೀನ
ಹಳೆ ನೆನಪುಗಳು ಭಾವುಕನನ್ನಾಗಿ ಮಾಡಬಹುದು. ಕುಟುಂಬ ಸದಸ್ಯರ ಜತೆ ನಿಮ್ಮ ಸಹನೀಯ ವರ್ತನೆ ಬಿಕ್ಕಟ್ಟು ಪರಿಹರಿಸುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!