ಮೇಷ
ನಿಮ್ಮ ಕೆರಿಯರ್ ಇಂದು ಪ್ರಾಮುಖ್ಯತೆ ಪಡೆಯುತ್ತದೆ. ನಿಮ್ಮ ಗುರಿ ಈಡೇರಿಸಲು ಪ್ರಯತ್ನಿಸಿ. ಸಣ್ಣಪುಟ್ಟ ಹಿನ್ನಡೆಗಳಿಗೆ ಅಂಜದಿರಿ. ಯಶಸ್ಸು ನಿಮ್ಮದೇ.
ವೃಷಭ
ವೃತ್ತಿಪರ ಯಶಸ್ಸು. ಎಲ್ಲರ ಜತೆ ಹೊಂದಾಣಿಕೆ ಮಾಡಿಕೊಂಡು ಬಾಳಿ. ಸಂಘರ್ಷಗಳಿಗೆ ಅವಕಾಶ ಕೊಡದಿರಿ. ವಾಗ್ವಾದದಿಂದ ದೂರವಿರಿ.
ಮಿಥುನ
ನಿಮ್ಮ ಕಾರ್ಯದಲ್ಲಿ ಯಶಸ್ಸು ಪಡೆಯಲು ಹೆಚ್ಚುವರಿ ಶ್ರಮ ಹಾಕಬೇಕು. ಕೌಟುಂಬಿಕ ಸೌಹಾರ್ದತೆ. ಆದರೆ ವೃತ್ತಿಯಲ್ಲಿ ವೈಷಮ್ಯ ಎದುರಿಸುವಿರಿ.
ಕಟಕ
ಪ್ರೀತಿಪಾತ್ರರ ಜತೆ ವ್ಯವಹರಿಸುವಾಗ ಭಾವನಾತ್ಮಕ ದೃಢತೆ ಪ್ರದರ್ಶಿಸಿ. ನಿಮ್ಮ ದೌರ್ಬಲ್ಯ ತೋರಿಸದಿರಿ. ಕುಟುಂಬಸ್ಥರಿಗೆ ಆರೋಗ್ಯ ಸಮಸ್ಯೆ.
ಸಿಂಹ
ಇತರರಿಗೆ ನೆರವು ನೀಡುವಲ್ಲಿ ಹೆಚ್ಚು ಉತ್ಸುಕತೆ ತೋರುವಿರಿ. ಇದರಿಂದ ಮಾನಸಿಕ ನೆಮ್ಮದಿ. ಆದರೆ ನಿಮ್ಮ ಆಪ್ತರು ಇದನ್ನು ಟೀಕಿಸಿಯಾರು.
ಕನ್ಯಾ
ಭಾವುಕ ಪ್ರಸಂಗ ಎದುರಿಸುವಿರಿ. ಆದರೆ ಮಾನಸಿಕವಾಗಿ ಕುಗ್ಗದಿರಿ. ಪ್ರತಿಕೂಲ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿ. ಎಲ್ಲ ಸರಿಯಾಗುವುದು.
ತುಲಾ
ಕೌಟುಂಬಿಕ ವಿಷಯಗಳು ಇಂದು ಆದ್ಯತೆ ಪಡೆಯುತ್ತವೆ. ಕೆಲವಾರು ಸಮಸ್ಯೆ ಪರಿಹರಿಸಲು ಮುಂದಾಗಬೇಕಿದೆ. ಕೆಲವನ್ನು ಹಾಗೇ ಬಿಡುವುದು ತರವಲ್ಲ.
ವೃಶ್ಚಿಕ
ಇತರರಿಂದ ಬೇರೆಯಾಗಿ ನಿಲ್ಲದಿರಿ. ಅವರೊಡನೆ ಬೆರೆಯಲು ಕಲಿಯಿರಿ. ಅದರಿಂದಲೆZ ನಿಮಗೆ ಲಾಭವಿದೆ. ಸಾಂಸಾರಿಕ ಬಿಕ್ಕಟ್ಟೊಂದು ಪರಿಹಾರ ಕಾಣುವುದು.
ಧನು
ಹಣದ ವಿಷಯದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ದೊಡ್ಡ ಮಟ್ಟದ ಹೂಡಿಕೆಗೆ ಹೋಗದಿರಿ. ಕೌಟುಂಬಿಕ ಕಲಹ ನಡೆದರೂ ಅದು ಕ್ಷಣಿಕ ಮಾತ್ರ.
ಮಕರ
ನಿಮಗೆದುರಾಗುವ ಅಡೆತಡೆಗಳಿಗೆ ಅಂಜದಿರಿ. ಅವೆಲ್ಲ ಕ್ಷಣಿಕ. ದಿನದಂತ್ಯಕ್ಕೆ ಎಲ್ಲವೂ ನಿಮಗೆ ಪೂರಕವಾಗಿ ಬದಲಾಗುವುದು.
ಕುಂಭ
ಕುಟುಂಬದ ಹಿರಿಯರು ಮತ್ತು ಕಿರಿಯರ ಮಧ್ಯೆ ಅಭಿಪ್ರಾಯ ಭೇದ ಉಂಟಾದೀತು. ಅದು ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ. ಸಂಯಮ ಕಾಯಿರಿ.
ಮೀನ
ವೃತ್ತಿಯಲ್ಲಿ ಹತಾಶೆ. ಅದಕ್ಕೆ ಕಾರಣ ಇತರರು ನಿಮಗೆ ಸರಿಯಾದ ಸಹಕಾರ ಕೊಡದಿರುವುದು. ಕುಶಲ ನಡೆ ನಿಮಗೆ ಅನುಕೂಲ ತಂದೀತು.