ಮೇಷ
ಹೊಸ ಉಲ್ಲಾಸ ತರು ವಂತಹ ಬೆಳವಣಿಗೆ. ನಿಮ್ಮ ಯೋಜನೆ ಫಲ ನೀಡುವುದು. ಸಂಬಂಧದಲ್ಲಿ ಸುಧಾರಣೆ. ಮನಸ್ತಾಪ ಕೊನೆಗೊಳ್ಳುವುದು.
ವೃಷಭ
ಕಾರ್ಯಗಳೆಲ್ಲ ಸುಗಮ. ಕಾರ್ಯ ಸಿದ್ಧಿ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಆದರೂ ಮನಸ್ಸಿನಲ್ಲಿ ಏನೋ ಕೊರಗು. ಏನೊ ಕೊರತೆ ಕಾಡುವುದು.
ಮಿಥುನ
ನಿಮ್ಮ ಗುರಿ ಸಾಧಿಸಲು ಪೂರಕವಾದ ದಿನ. ನೀವು ಬಯಸಿದಂತೆ ಎಲ್ಲವೂ ನಡೆಯುವುದು. ಆಪ್ತರೊಂದಿಗೆ ಫಲಪ್ರದ ಮಾತುಕತೆ.
ಕಟಕ
ಉದ್ಯೋಗದಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಕೆಲವರಿಂದ ಅಸಹಕಾರ ಎದುರಿಸುವಿರಿ. ಆದರೂ ದಿನದಂತ್ಯಕ್ಕೆ ಕಾರ್ಯಗಳೆಲ್ಲ ಸಫಲ. ಆತ್ಮಸಂತೃಪ್ತಿ.
ಸಿಂಹ
ಯಶಸ್ವಿ ದಿನ. ಕಾರ್ಯದಲ್ಲಿ ಉತ್ಸಾಹ, ಬದ್ಧತೆ. ಇದರಿಂದಾಗಿ ಯಾವುದೇ ಕಠಿಣ ಗುರಿಯನ್ನೂ ಸಾಸುತ್ತೀರಿ. ಕೌಟುಂಬಿಕ ಸಹಕಾರ.
ಕನ್ಯಾ
ಕೆಲಸದಲ್ಲಿ ತಪ್ಪುಗಳು ಘಟಿಸಬಹುದು. ಹಾಗಾಗಿ ಎಚ್ಚರದಿಂದ ಕಾರ್ಯನಿರ್ವಹಿಸಿ. ಆರ್ಥಿಕ ಮುಗ್ಗಟ್ಟು ಕಾಡಬಹುದು. ಕೌಟುಂಬಿಕ ಅಸಹಕಾರ.
ತುಲಾ
ಮನಸ್ಸಿನಲ್ಲಿ ಮೂಡುವ ನಕಾರಾತ್ಮಕ ಚಿಂತನೆಗಳನ್ನು ಮೊದಲು ದೂರ ಮಾಡಿರಿ. ಇಲ್ಲವಾದರೆ ನಿಮ್ಮ ಉದ್ದೇಶವು ಸಾಧನೆಯಾಗದು.
ವೃಶ್ಚಿಕ
ಕೆಲಸದಲ್ಲಿ ಹೆಚ್ಚು ಜವಾಬ್ದಾರಿ. ಭಾವನಾ ತ್ಮಕ ಪರಿಸ್ಥಿತಿಗೆ ಸಿಲುಕು ತ್ತೀರಿ. ಇದರಿಂದ ಹೊಣೆ ಗಾರಿಕೆ ನಿಭಾಯಿಸಲು ಕಷ್ಟವಾದೀತು. ಮನಸ್ಸು ದೃಢ ಮಾಡಿಕೊಳ್ಳಿ.
ಧನು
ಬಹಳಷ್ಟು ವಿಚಾರಗಳಲ್ಲಿ ಇಂದು ನಿಮಗೆ ಪೂರಕ ಬೆಳವಣಿಗೆ ಸಂಭವಿಸುವುದು. ಮನೆಯಲ್ಲಿನ ಅಶಾಂತಿ ನಿವಾರಣೆ. ಸೌಹಾರ್ದ ಮೂಡುವುದು.
ಮಕರ
ನಿಮ್ಮ ಕೆಲಸವು ಸರಿಯಾದ ಸಮಯ ದಲ್ಲಿ ಮುಕ್ತಾಯ ಕಾಣುವುದಿಲ್ಲ. ಇದರಿಂದ ಮಾನಸಿಕ ಕ್ಲೇಶ. ಸಂಬಂಧದಲ್ಲಿ ಬಿಕ್ಕಟ್ಟು.
ಕುಂಭ
ಕಾರ್ಯದಲ್ಲಿ ಅಡ್ಡಿಗಳು. ಕೆಲವು ಕಾರ್ಯವನ್ನು ಮುಂದೂಡಬೇಕಾದ ಅನಿವಾರ್ಯತೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ನೆಮ್ಮದಿ ಕಾಣುವಿರಿ.
ಮೀನ
ಅತಿಯಾದ ಕೆಲಸ. ವಿರಾಮ ಸಿಗುವುದಿಲ್ಲ. ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುವಿರಿ. ಆರ್ಥಿಕ ಒತ್ತಡ ಹೆಚ್ಚು.