ದಿನಭವಿಷ್ಯ| ಮನಸ್ಸು ಹಿಡಿತಲ್ಲಿಟ್ಟುಕೊಂಡರೆ ನಿಮಗೇ ಲೇಸು

ಮೇಷ
ಧಾರ್ಮಿಕ ಕಾರ್ಯ ಗಳಲ್ಲಿ ಹೆಚ್ಚು ವ್ಯಸ್ತ ರಾಗುವ ಪ್ರಸಂಗ. ಬಂಧುಮಿತ್ರರ ಭೇಟಿ. ವೃತ್ತಿಯಲ್ಲಿ ಅನಪೇಕ್ಷಿತ ಬೆಳವಣಿಗೆಯಿಂದ ಉದ್ವಿಗ್ನತೆ.

ವೃಷಭ
ಇಂದಿನದು ವಿಶೇಷ ದಿನ. ಯಾವುದೂ ನಿಮ್ಮ ಇಷ್ಟಕ್ಕೆ ವಿರೋಧವಾಗಿ ಸಾಗುವುದಿಲ್ಲ. ಬಯಸಿದ ಬೆಳವಣಿಗೆ ಸಂಭವಿಸುತ್ತದೆ. ಕೌಟುಂಬಿಕ ಶಾಂತಿ.

ಮಿಥುನ
ನಿರಂತರ ದುಡಿಮೆ ನಿಮ್ಮನ್ನು ಸುಸ್ತಾಗಿಸುತ್ತದೆ. ತುಸುವಿರಾಮ ಪಡೆದು ಆನಂದ ಪಡಕೊಳ್ಳಿ. ದುಡಿಮೆಗಿಂತ ಹೊರತಾದ ಬದುಕನ್ನೂ ನೋಡಿರಿ.

ಕಟಕ
ನೀವಿಂದು ರೋಷದಿಂದ ಸಿಡಿದೇಳುವ ಪರಿಸ್ಥಿತಿ ಉದ್ಭವಿಸಬಹುದು. ಅಪರಾಹ್ನ ಉದ್ಯಮಕ್ಕೆ ಸಂಬಂಧಿಸಿ ಪ್ರಮುಖ ಬೆಳವಣಿಗೆ. ಕೋಪತಾಪ ನಿಯಂತ್ರಿಸಿಕೊಳ್ಳಿ.

ಸಿಂಹ
ಕುಟುಂಬ ಸದಸ್ಯರ ಜತೆ ಸಂತೋಷದ ಕಾಲಕ್ಷೇಪ. ನಿಮ್ಮ ಜೀವನಶೈಲಿ ಬದಲಿಸಬೇಕಾಗ ಬಹುದು. ಮುಖ್ಯವಾಗಿ ಆಹಾರ ಸೇವನೆ ಹಿತಮಿತವಾಗಿರಲಿ.

ಕನ್ಯಾ
ಇಂದು ನೀವು ನಿಮಗೆ ಇಷ್ಟವಾದ ಕಾರ್ಯವನ್ನಷ್ಟೆ ಮಾಡಲು ಬಯಸುವಿರಿ. ಇತರ ಕೆಲಸಗಳನ್ನು ಕಡೆಗಣಿಸುವಿರಿ.

ತುಲಾ
ಕಾಲ ಯಾರಿಗೂ ಕಾಯುವುದಿಲ್ಲ. ಇದನ್ನು ನೆನಪಿಟ್ಟು ಕೊಳ್ಳಬೇಕು. ಕಳೆದ ದಿನಗಳ ಗುಂಗಿನಲ್ಲಿ ಇಂದಿನ ಕೆಲಸ ಮರೆಯಬೇಡಿ.

ವೃಶ್ಚಿಕ
ನೀವು ಉನ್ನತ ಸ್ಥಿತಿಗೆ ಏರಬೇಕಾದರೆ ನಿಮ್ಮ ಭಾವನೆಯನ್ನು ನಿಯಂತ್ರಿಸುವುದು ಅವಶ್ಯ. ಭಾವುಕತೆ ನಿಮ್ಮ ಭವಿಷ್ಯಕ್ಕೆ ಮುಳುವಾಗ ಬಹುದು.

ಧನು
ನಿಮ್ಮ ಕ್ರಿಯಾಶೀಲತೆ ಇಂದು ಉನ್ನತ ಮಟ್ಟದಲ್ಲಿರುತ್ತದೆ. ಖಾಸಗಿ ಮತ್ತು ವೃತ್ತಿ ಬದುಕೆರಡರಲ್ಲೂ ಇದು ತೋರಿಬರಲಿದೆ. ಕೌಟುಂಬಿಕ ಸಂತಸ.

ಮಕರ
ಪ್ರೀತಿ ನಿಮ್ಮ ಪಾಲಿಗೆ ಖುಶಿ ಕೊಡುವ ವಿಚಾರ. ಅದನ್ನು ಇಂದು ಅನುಭವಿಸುವಿರಿ. ಪ್ರೀತಿಪಾತ್ರರ ಸಂಗದಲ್ಲಿ ಸಂತೋಷ. ಮನಸ್ಸು ನಿರಾಳ.

ಕುಂಭ
ಹಿರಿಯರೊಬ್ಬರ ಹಿತ ನುಡಿ ನಿಮಗೆ ವರದಾನವಾಗ ಬಹುದು ಸಮಸ್ಯೆಗೆ ಪರಿಹಾರ ಕಲ್ಪಿಸ ಬಹುದು. ಸಾಂಸಾರಿಕ ಸಮಾಧಾನ.

ಮೀನ
ಹಣಕಾಸಿಗೆ ಸಂಬಂಸಿ ಸೂಕ್ತ ಯೋಜನೆ ಅವಶ್ಯ ಎಂಬುದು ನಿಮಗೆ ಅರಿವಾಗಲಿದೆ. ಖರ್ಚು ನಿಯಂತ್ರಿಸಿ.  ಕೌಟುಂಬಿಕ ಕಾರ್ಯಕ್ರಮ ಹೆಚ್ಚು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!