Friday, December 8, 2023

Latest Posts

ದಿನಭವಿಷ್ಯ| ಪ್ರತಿಯೊಂದು ವಿಷಯದ ಕುರಿತು ಅತಿಯಾಗಿ ಚಿಂತಿಸುವಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಕೆಲಸದ ಒತ್ತಡ ಕಡಿಮೆ. ಹಾಗಾಗಿ ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯಲು ಅವಕಾಶ.  ನಿಮ್ಮ ನಿರ್ಲಕ್ಷ್ಯದಿಂದ ಧನಹಾನಿ ಸಂಭವಿಸಬಹುದು.

ವೃಷಭ
ಕಾಲಮಿತಿಯಲ್ಲಿ ಕೆಲಸ ಮುಗಿಸಬೇಕಾದ ಒತ್ತಡ. ಹತಾಶೆ, ಅಸಹನೆ ಕಾಡಬಹುದು. ವಾಗ್ವಾದ ಸಂಭವ. ಆರೋಗ್ಯ ಸಮಸ್ಯೆ ಇದ್ದರೆ ಅದನ್ನು ಕಡೆಗಣಿಸಬೇಡಿ.

ಮಿಥುನ
ಶ್ರಮ ಪಟ್ಟರೆ ಯಶಸ್ಸು ಅಸಾಧ್ಯವಲ್ಲ. ಹಳೆಯ ಹಣ ಹೂಡಿಕೆ ಲಾಭ ತಂದುಕೊಡುವುದು. ಕೌಟುಂಬಿಕ ಸಮಸ್ಯೆಗೆ ಪರಿಹಾರ ದೊರಕುವ ಕಾಲ ಸನ್ನಿಹಿತ.

ಕಟಕ
ನಿಮ್ಮ ಕೆಲಸದ ಪ್ರಗತಿಯ ಕುರಿತಂತೆ ಚಿಂತೆ ಕಾಡುವುದು. ಸಮೀಪಬಂಧುಗಳ ಜತೆ ಭಿನ್ನಮತ ಸಂಭವ. ಸಹನೆಯಿಂದ ವರ್ತಿಸುವುದು ಅವಶ್ಯ.

ಸಿಂಹ
ನಿಮ್ಮ ಪಾಲಿಗೆ ಯಶಸ್ವಿ ದಿನ. ಉದ್ದೇಶಿಸಿದ ಕಾರ್ಯ ಸುಲಭವಾಗಿ ಈಡೇರುವುದು. ಆರ್ಥಿಕ ಸುಸ್ಥಿರತೆ. ಬಂಧುಗಳಿಂದ ಸಹಕಾರ,ಸಹಾಯ.

ಕನ್ಯಾ
ಇಂದಿನ ಕಾರ್ಯ ಸುಲಭದಲ್ಲಿ ಸಾಗದು. ಆಗಾಗ ಅಡ್ಡಿಗಳು. ಹಣಕ್ಕೆ ಸಂಬಂಧಿಸಿ ದೊಡ್ಡ ನಿರ್ಧಾರ ತಾಳದಿರಿ. ಬಂಧುಗಳಿಂದ ಸಹಕಾರದ ಕೊರತೆ.

ತುಲಾ
ಪ್ರತಿಯೊಂದು ವಿಷಯದ ಕುರಿತು ಅತಿಯಾಗಿ ಚಿಂತಿಸುವಿರಿ. ಭವಿಷ್ಯದ ಬಗ್ಗೆ ಆಲೋಚನೆ ಹೆಚ್ಚು. ಭಾವನಾತ್ಮಕ  ಏರುಪೇರು. ಮನಸ್ಸು ತಹಬದಿಗೆ ತನ್ನಿರಿ.

ವೃಶ್ಚಿಕ
ಇಂದು ನಿಮ್ಮ ಕಾರ್ಯ ಮತ್ತು ಚಿಂತನೆ ಹೆಚ್ಚು ನಿಖರತೆಯಿಂದ ಕೂಡಿರುತ್ತದೆ. ವೃತ್ತಿಯಲ್ಲಿ ನಿಮಗಿರುವ ಸಂಪನ್ಮೂಲ ಸರಿಯಾಗಿ ಬಳಸಿಕೊಳ್ಳುವಿರಿ.

ಧನು
ಮನೆ ಮತ್ತು ಉದ್ಯೋಗದಲ್ಲಿ ಹೊಣೆಗಾರಿಕೆ ಹೆಚ್ಚು. ಸಹನೆಯಿಂದ ಕಾರ್ಯ ನಿರ್ವಹಿಸಿ. ಭಿನ್ನಮತ, ವಾಗ್ವಾದಕ್ಕೆ ಅವಕಾಶ ಕೊಡದಿರಿ.

ಮಕರ
ಶಾಂತ ಮನಸ್ಥಿತಿ. ಹಾಗಾಗಿ ಯಾವುದೇ ನಿರ್ಧಾರ ತಳೆಯಲು ಸಮರ್ಥರಾಗುವಿರಿ. ಸಂಗಾತಿ ಜತೆಗೆ ಅವಿಸ್ಮರಣೀಯ ದಿನ ಕಳೆಯುವಿರಿ.

ಕುಂಭ
ಸವಾಲಿನ ದಿನ. ಹತಾಶೆ ಕಾಡಬಹುದು. ಕೆಲಸದ ಒತ್ತಡ ಅಥವಾ ಕೌಟುಂಬಿಕ ಸಂಘರ್ಷ ಇದಕ್ಕೆ ಕಾರಣ. ಸವಾಲಿಗೆ ಹೊಂದಿಕೊಳ್ಳಲು ಕಲಿಯಿರಿ.

ಮೀನ
ನಿಮ್ಮ ಪಾಲಿಗೆ ಕೆಲವಾರು ಬೆಳವಣಿಗೆ ಸಂಭವಿಸುವುದು. ಅನಿರೀಕ್ಷಿತ ಧನಲಾಭ. ಆರೋಗ್ಯ ಸಮಸ್ಯೆಯಿದ್ದರೆ ಇಂದು ಪರಿಹಾರ ಕಾಣುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!