5‌ ಲಕ್ಷ ಮೌಲ್ಯದ ಕೊಕೇನ್‌ ಖರೀದಿಸುವ ವೇಳೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಆಸ್ಪತ್ರೆ CEO

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ ಆಸ್ಪತ್ರೆಯೊಂದರ ಸಿಇಓ 5‌ ಲಕ್ಷ ಮೌಲ್ಯದ ಕೊಕೇನ್‌ ಖರೀದಿಸುವ ವೇಳೆ ಪೊಲೀಸರಿಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ನಮ್ರತಾ ಚಿಗುರುಪತಿ ಬಂಧಿತ ಆರೋಪಿ. ಮುಂಬೈ ಮೂಲದ ಡೀಲರ್‌ ಕಳುಹಿಸಿದ್ದ ಕೊರಿಯರ್‌ ಮೂಲಕ ಕೊಕೇನ್‌ ಪಡೆಯುತ್ತಿದ್ದಾಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಡೀಲರ್‌ ಧಕ್ಕರ್‌ ಆಪ್ತ ಬಾಲಕೃಷ್ಣ ಜೊತೆಗೆ ನಮ್ರತಾಳನ್ನೂ ಕೂಡ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಬಂಧಿತರಿಂದ 10,000 ರೂ. ನಗದು, 53 ಗ್ರಾಂ ಕೊಕೇನ್‌ ಹಾಗೂ 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ನಮ್ರತಾ ಡ್ರಗ್ಸ್‌ಗಾಗಿ 70 ಲಕ್ಷ ಖರ್ಚುಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!