ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ಉಗ್ರರು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡಿರುವ ಹೆಚ್ಚಿನ ಜನರು ಜೀವಂತವಾಗಿದ್ದಾರೆ ಎಂದು ಇಸ್ರೇಲ್ ಹೇಳಿದೆ.
ಯಾವುದೇ ಕ್ಷಣದಲ್ಲೂ ಗಾಜಾ ಪ್ರವೇಶಕ್ಕೆ ತನ್ನ ಸೇನೆ ಸಿದ್ಧವಾಗಿದೆ ಎಂದು ಇಸ್ರೇಲ್ ಮಾಹಿತಿ ನೀಡಿದೆ. ಈವರೆಗೂ ಒಟ್ಟಾರೆ ಮೂರು ಸಾವಿರ ಜನರು ನಾಪತ್ತೆಯಾಗಿದ್ದಾರೆ.ಕಾಣೆಯಾದವರ ಪ್ರದೇಶ, ವಿಳಾಸ ಪತ್ತೆಯಾಗಿದೆ. ನಾಪತ್ತೆಯಾದವರಲ್ಲಿ ಸಾಕಷ್ಟು ಮಂದಿ ಜೀವಂತವಾಗಿದ್ದಾರೆ, ಯಾವುದೇ ಕ್ಷಣದಲ್ಲೂ ಗಾಜಾ ಪ್ರವೇಶಕ್ಕೆ ತನ್ನ ಸೇನೆ ಸಿದ್ಧ ಎಂದು ಇಸ್ರೇಲ್ ಹೇಳಿದೆ.
ಒಟ್ಟಾರೆ 18 ವರ್ಷಕ್ಕೂ ಕಡಿಮೆ ವಯಸ್ಸಿನ 20 ಒತ್ತೆಯಾಳುಗಳಿದ್ದಾರೆ, 20 ಕ್ಕೂ ಹೆಚ್ಚು ಮಂದಿ ಸೀನಿಯರ್ ಸಿಟಿಝನ್ಸ್ ಹಮಾಸ್ ಉಗ್ರರ ಬಳಿ ಸಿಲುಕಿದ್ದಾರೆ. ಎಲ್ಲದಕ್ಕೂ ನಾವು ಸಿದ್ಧವಾಗಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ಸುರಕ್ಷಿತವಾಗಿರಿಸಲು ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.