ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಹಬ್ಬ ದಸರಾ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಕ್ತಿಯೊಬ್ಬ ಅವಹೇಳನಾಕಾರಿ ಪೋಸ್ಟ್ ಹಾಕಿದ್ದು, ಎಫ್‌ಐಆರ್ ದಾಖಲಾಗಿದೆ.
ತುಮಕೂರಿನ ಶ್ರೀನಿವಾಸಮೂರ್ತಿ ಎನ್ನುವಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ, ಕಾಂಗ್ರೆಸ್ ವಕ್ತಾರ ಸೂರ್ಯ ಮುಕುಂದರಾಜ್ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಾಗಿದೆ.
ಸೀನಾ ಹಿಂದೂಸ್ಥಾನ ಸೇನೆ ಎಂಬ ಫೇಸ್‌ಬುಕ್ ಖಾತೆಯಿಂದ ಪೋಸ್ಟ್ ಆಗಿದ್ದು, ತೋಲಾಂಡಿಗಳು ಸೇರಿಕೊಂಡು ಮುಂದಿನ ವರ್ಷ ಸಿದ್ದಾಸುರಾ ದಸರಾ ಮಾಡಿದ್ರೂ ಆಶ್ಚರ್ಯ ಇಲ್ಲ ಎಂದು ಅಣಕ ಮಾಡಿದ್ದಾರೆ. ಮಹಿಷಾಸುರನ ಪ್ರತಿಮೆ ವಿರೂಪಗೊಳಿಸಿದ್ದು, ಪೋಸ್ಟ್ ಡಿಲೀಸ್ ಮಾಡಲಾಗಿದೆ.