August 30, 2026
Sunday, August 30, 2026
spot_img

ಗ್ಯಾಸ್ ಸಿಲಿಂಡರ್ ಸಿಗದೇ ಹೊಟೇಲ್ ಬಂದ್: ಮನನೊಂದು ಆತ್ಮಹತ್ಯೆಗೆ ಶರಣಾದ ಮಾಲೀಕ

ಹೊಸದಿಗಂತ ವರದಿ, ಬೆಳಗಾವಿ :

ಮಧ್ಯ ಪ್ರಾಂತ್ಯದಲ್ಲಿ ಯುದ್ಧದ ಎಫೆಕ್ಟ್ ಬೆಳಗಾವಿ ಜಿಲ್ಲೆಗೆ ತಟ್ಟಿದೆ, ಪ್ರತಿನಿತ್ಯ ಸಾವಿರಾರು ಜನತೆಗೆ ಅನ್ನ ಹಾಕುವ ಹೊಟೇಲ್ ಗಳು ಇದೀಗ ಬಂದ್ ಆಗುವ ಪರಿಸ್ಥಿತಿ ಎದುರಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ, ರಾಮ ಹಳ್ಳೂರಿ ಸಿಲಿಂಡರ್ ಸಿಗದೇ ಇರುವುದರಿಂದ ಕೆಲ ದಿನಗಳಿಂದ ನಮ್ಮ ಹೊಟೇಲ್ ಬಂದ್ ಮಾಡಿಕೊಂಡಿದ್ದರು. ಸಾಲವನ್ನು ಮಾಡಿಕೊಂಡು ಹೊಟೇಲ್ ಉದ್ಯಮವನ್ನು ನಡೆಸುತ್ತಿದ್ದು, ಇದೀಗ ಸಿಲಿಂಡರ್ ಸಿಗದೇ ಇದ್ದಲ್ಲಿ ಮತ್ತಷ್ಟು ಹೋಟೆಲ್ ಉದ್ಯಮ ಲಾಸ್ ಆಗಿರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.

ಹುಕ್ಕೇರಿ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಹನುಮಾನ ಹೊಟೇಲ್ ಮಾಲೀಕರಾಗಿದ್ದ ರಾಮ ಹಳ್ಳೂರಿ, ಮಾರ್ಚ ಅಂತ್ಯದ ವೇಳೆ ಬಡ್ಡಿ ಕಾಟ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಹುಕ್ಕೇರಿ ಪೊಲೀಸ್ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ ತನಿಖೆ ಮುಂದು ವರೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !