ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಎಲ್ಲವೂ ದುಬಾರಿಯಾಗಿದೆ. ಮನೆಯ ಬಾಡಿಗೆಯಿಂದ ಹಿಡಿದು ಹೊಟೇಲ್‌ನಲ್ಲಿ ಕುಡಿಯುವ ಒಂದು ಕಪ್ ಕಾಫಿ ರೇಟ್ ಕೂಡ ಹೆಚ್ಚಾಗಿದೆ. ಬೆಲೆ ಏರಿಕೆಯಿಂದಾಗಿ ಹೊಟೇಲ್ ಕಡೆ ಜನ ಮುಖ ಮಾಡುತ್ತಿಲ್ಲ. ಇದರಿಂದಾಗಿ ಹೊಟೇಲ್‌ಗಳಿಗೂ ಮುಂಚಿನಷ್ಟು ಲಾಭ ಆಗುತ್ತಿಲ್ಲ. ಈ ಮಧ್ಯೆ ಹೋಟೆಲ್‌ಗಳಿಗೆ ಕಸದ ಸೆಸ್ ಬರೆಯ ಬಿಸಿ ತಟ್ಟಿದ್ದು, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದರ ಏರಿಕೆಯ ಹೊರೆ ಜನರ ಪಾಲಿಗೆ ಬಿಸಿ ತುಪ್ಪದಂತಾಗಿದೆ. ಇದರ ಮಧ್ಯೆ ಈಗ ಏಪ್ರಿಲ್‌ನಿಂದ ಕಸದ ಸೆಸ್ ಬರೆ ಬೀಳಲಿದೆ. ಕಸದ ಸೆಸ್‌ಗೆ ಈಗ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಕಿಡಿಕಾರಿದೆ. ಒಂದು ಕೆಜಿಗೆ 12 ರೂ. ಫಿಕ್ಸ್ ಮಾಡಿದ್ದು, ಈ ಹಿಂದೆ ತಿಂಗಳಿಗೆ 5 ಸಾವಿರ ಕಸದ ಸೆಸ್ ಕಟ್ಟಲಾಗುತ್ತಿತ್ತು. ಆದರೆ ಈಗ ಬರೋಬ್ಬರಿ 30 ಸಾವಿರ ರೂ. ಕಸದ ಸೆಸ್ ಕಟ್ಟಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.