ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
ಹೆಸರು ಬೇಳೆ ಕಾಲು ಕೆಜಿ, ಈರುಳ್ಳಿ ಮೂರು ಗಡ್ಡೆ, ಮೆಣಸಿನ ಹುಡಿ (ಖಾರಕ್ಕೆ ಬೇಕಾದಷ್ಟು), ಬೆಲ್ಲ ಸ್ವಲ್ಪ, ರುಚಿಗೆ ಬೇಕಾದಷ್ಟು ಉಪ್ಪು, ಸ್ವಲ್ಪ ಇಂಗು, ಹುಣಸೆ ಹಣ್ಣು ಸ್ವಲ್ಪ, ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಹೆಸರು ಬೇಳೆಯನ್ನು ಬೇಯಿಸಿ ನಯವಾಗಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಒಗ್ಗರಣೆ ಮಾಡಿ. ಇದರಲ್ಲಿ ಈರುಳ್ಳಿಯನ್ನು ಹೆಚ್ಚಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ರುಬ್ಬಿದ ಮಿಶ್ರಣ, ಬೆಲ್ಲ, ಉಪ್ಪು, ಮೆಣಸಿನ ಹುಡಿ,ಇಂಗು ಸೇರಿಸಿ, ಹುಣಸೆ ಹಣ್ಣನ್ನು ಕಿವುಚಿ ರಸ ಸೇರಿಸಿ ಕುದಿಸಿ. ಸರಿಯಾಗಿ ಕುದಿಸಿದ ನಂತರ ಕೆಳಗಿಳಿಸಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಅನ್ನ, ಚಪಾತಿ, ರೊಟ್ಟಿ ಜೊತೆ ಸರ್ವ್ ಮಾಡಿ.