ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು
ಚೀಸ್
ಬೆಳ್ಳುಳ್ಳಿ
ಹಸಿಮೆಣಸಿನಕಾಯಿ
ಚಿಲ್ಲಿ ಫ್ಲೇಕ್ಸ್
ಒರೆಗಾನೊ
ಕೊತ್ತಂಬರಿ ಸೊಪ್ಪು
ತುಪ್ಪ
ಉಪ್ಪು
ಮಾಡುವ ವಿಧಾನ:
ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು ಮತ್ತು ನೀರು ಸೇರಿಸಿ ಚಪಾತಿ ಹಿಟ್ಟಿನಂತೆ ಮೆದುವಾಗಿ ಕಲಸಿ, 10 ನಿಮಿಷ ನೆನೆಯಲು ಬಿಡಿ. ಒಂದು ಬೌಲ್ನಲ್ಲಿ ತುರಿದ ಚೀಸ್, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಚಿಲ್ಲಿ ಫ್ಲೇಕ್ಸ್, ಒರೆಗಾನೊ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ. ಕಲಸಿದ ಹಿಟ್ಟಿನಿಂದ ದೊಡ್ಡ ಉಂಡೆ ತೆಗೆದುಕೊಂಡು ಸಣ್ಣಗೆ ಲಟ್ಟಿಸಿ. ಅದರ ಮಧ್ಯದಲ್ಲಿ ಚೀಸ್ ಮಿಶ್ರಣವನ್ನು ಇಟ್ಟು, ನಾಲ್ಕೂ ಕಡೆಯಿಂದ ಮುಚ್ಚಿ ಮತ್ತೆ ಲಟ್ಟಿಸಿ. ಕಾದ ಹಂಚಿನ ಮೇಲೆ ಪರೋಟ ಹಾಕಿ, ಎರಡೂ ಬದಿಗೆ ತುಪ್ಪ ಸವರಿ. ಚೀಸ್ ಕರಗಿ, ಪರೋಟ ಹೊಂಬಣ್ಣಕ್ಕೆ ಬರುವವರೆಗೆ ಬೇಯಿಸಿದರೆ ಬಿಸಿ ಬಿಸಿಯಾದ, ಚಿಲ್ಲಿ ಚೀಸ್ ಗಾರ್ಲಿಕ್ ಪರೋಟ ಸವಿಯಲು ಸಿದ್ಧ!



