KNOW WHY| ಹೂವಿನ ದಳಗಳನ್ನು ಬಿಡಿಸಿ ಪೂಜೆ ಮಾಡಬಾರದ್ಯಾಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೂವಿಲ್ಲದೆ ದೇವರ ಪೂಜೆ ಸಂಪನ್ನವಾಗದು. ತಮ್ಮ ತೋಟದಲ್ಲಿ ಬೆಳೆಸಿದ ಹೂವಿಟ್ಟು ಪೂಜೆ ಮಾಡುವುದು ಶ್ರೇಷ್ಟ ಎಂದೂ, ಯಾರದೋ ಮನೆಯಿಂದ ತಂದ ಹೂವು ಮಧ್ಯಮ ಪೂಜೆ ಎಂದೂ, ಕದ್ದು ತರುವ ಹೂವಿನಿಂದ ಪೂಜೆ ಕೇಳೆಂದೂ ಹೇಳಲಾಗುತ್ತದೆ. ಹೂವುಗಳನ್ನು  ದೇವರ ಪೂಜೆಯಲ್ಲಿ ಹೇಗೆ ಬಳಸಬೇಕು? ಯಾವು ಹೂ ಬಳಸಬಾರದು? ಅದೇ ರೀತಿ ಹೂವಿನ ದಳ ಕಿತ್ತು ಪೂಜೆ ಮಾಡಬಾರದೇಕೆ? ಎಂಬುದನ್ನು ತಿಳಿಯೋಣ.

ದೇಶಿ ಹೂವುಗಳನ್ನು ಯಾವುದೇ ರೀತಿಯ ಪೂಜೆಗೆ ಬಳಸಬಹುದು, ಅದರಲ್ಲೂ ಮನೆಯಲ್ಲಿ ಬೆಳೆಸಿದ ಹೂವುಗಳಿಂದ ಪೂಜೆ ಮಾಡಿದರೆ ದೇವರ ಕೃಪೆ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ವಿಷ್ಣುವಿನ ಆರಾಧಕರು ಹಳದಿ ಹೂವುಗಳನ್ನು, ಗಣಪತಿಗೆ ಗನ್ನೇರು ಹೂವುಗಳನ್ನು ಮತ್ತು ದುರ್ಗೆಗೆ ದಾಸವಾಳದ ಹೂವುಗಳನ್ನು ಬಳಸಬೇಕು. ಶನಿ ದೇವರ ಪೂಜೆಯಲ್ಲಿ ನೀಲಿ ಹೂವುಗಳನ್ನು ಬಳಸಬಹುದು.

ಯಾವುದೇ ಹೂ ಬಳಸಿದರೂ ಬಿಡಿಸದೆ ಹಾಗೆಯೇ ಪೂಜೆಗಿಡಬೇಕು. ದಳಗಳನ್ನು ಬೇರ್ಪಡಿಸಿ ದೇವರಿಗೆ ಇಡುವುದು ಶ್ರೇಯಸ್ಕರವಲ್ಲ. ಹೀಗೆ ಮಾಡುವುದರಿಂದ ಪತಿ-ಪತ್ನಿಯರ ನಡುವೆ ವಿರಹ ಉಂಟಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಒಟ್ಟಾಗಿರುವ ಹೂವನ್ನು ಬೇರ್ಪಡಿಸಿದ ಶಾಪ ತಗಲುತ್ತದೆ ಎಂದೂ ಹೇಳಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!