ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಹೃದಯಾಘಾತದಿಂದಾಗಿ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ ಯುವ ನಟನೊಬ್ಬ ಹೃದಯಾಘತದಿಂದಾಗಿ ಮೃತಪಟ್ಟಿದ್ದಾರೆ.
ಮಂಡ್ಯ ಮೂಲದ ಪವನ್ ಹೃದಯಾಘಾತದಿಂದ ಮೃತಪಟ್ಟಿದ್ದು, ಇವರಿಗೆ ಕೇವಲ 24 ವರ್ಷ ವಯಸ್ಸಾಗಿತ್ತು. ಕೆ.ಆರ್. ಪೇಟೆಯ ಹರಿಹರಪುರದ ನಟ ತನ್ನ ತಂದೆ-ತಾಯಿ ಜತೆ ಮುಂಬೈಯಲ್ಲಿ ವಾಸವಿದ್ದರು.
ತಮಿಳು ಹಾಗೂ ಹಿಂದಿ ಕಿರುತೆರೆ ಕಲಾವಿದರಾಗಿದ್ದ ಪವನ್, ದೊಡ್ಡ ಸ್ಕ್ರೀನ್ ಮೇಲೆ ಬರುವ ಆಸೆ ಇಟ್ಟುಕೊಂಡಿದ್ದರು. ಹುಟ್ಟೂರಿನಲ್ಲಿ ಇಂದು ಅಂತ್ಯಸಂಸ್ಕಾರ ನಡೆಯಲಿದೆ.