ಹೊಸದಿಗಂತ ವರದಿ,ಕಲಘಟಗಿ :
ತಾಲೂಕಿನ ಬಿ.ಗುಡಿಹಾಳ ಗ್ರಾಮದಲ್ಲಿ ಮನೆಯೊಂದು ಬೆಂಕಿಗೆ ಅಹುತಿಯಾಗಿದೆ. ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ .
ಗುಡಿಹಾಳ ಕ್ರಾಸ್ ಅಲ್ಲಿ ವಾಸವಾಗಿರುವ ಬಸಯ್ಯ ಅಡವಯ್ಯ ಹಿರೇಮಠ ಅವರಿಗೆ ಸೇರಿದ ಮನೆ ಬೆಂಕಿಗೆ ಬಲಿಯಾಗಿದೆ. ಘಟನೆಯಲ್ಲಿ ಅಂದಾಜು ಮೂರರಿಂದ ನಾಲ್ಕು ಲಕ್ಷ ಮೌಲ್ಯದ ಆಸ್ತಿಪಾಸ್ತಿ ಹಾನಿ ಆಗಿದೆ.
ಘಟನಾ ಸ್ಥಳಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಹಶೀಲ್ದಾರ್ ಯಲ್ಲಪ್ಪ ಗೊನೆನ್ನವರ್ ಹಾಗೂ ಕಲಘಟಗಿ ಪೊಲೀಸ ಸಿಪಿಐ ಶ್ರೀಶೈಲ್ ಕೌಜಲಗಿ ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಸಚಿವ ಸಂತೋಷ್ ಲಾಡ್ ಸರಕಾರದಿಂದ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿದರು.
ಬ್ಯಾಟರಿ ಸೋಟ : ಎಲೆಕ್ಟ್ರಿಕ್ ಬೈಕ್ ಸೋಟಗೊಂಡಿದ್ದರಿಂದ ಮನೆಗೆ ಬೆಂಕಿ ತಗಲಿದೆ ಎಂದು ಶಂಕೆ ವ್ಯಕ್ತವಾಗಿದೆ. ಚಾರ್ಜಿಂಗ್ ವೇಳೆ ಬ್ಯಾಟರಿ ಸೋಟಗೊಂಡು ಅನಾಹುತ ಸಂಭವಿಸಿದೆ. ಕಟ್ಟಿಗೆಯ ಮಡಿಗೆ ಮನೆಯ ಸಂಪೂರ್ಣ ಸುಟ್ಟು ಗೋಡೆಗಳು ಬಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.