ಹೊಸದಿಗಂತ ಹಾವೇರಿ:
ಸವಣೂರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಸತತ ಮಳೆಗೆ ಮನೆ ಕುಸಿದು ಬಿದ್ದು ಮೂವರ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದ ಪ್ರಕರಣದಲ್ಲಿ ಮತ್ತೋರ್ವ ಮಹಿಳೆ ಮೃತಪಟ್ಟಿದ್ದಾರೆ.
ಈ ಮೂಲಕ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಯಲ್ಲಮ ಹರಕುಣಿ (68) ಮೃತಪಟ್ಟವರು. ಜುಲೈ 19 ರಂದು ಮಾದಾಪುರ ಗ್ರಾಮದಲ್ಲಿ ದುರಂತ ನಡೆದಿತ್ತು.
ಕಳೆದ ಶುಕ್ರವಾರದಂದು ಮನೆ ಮೇಲ್ಚಾವಣಿ ಕುಸಿದು ಅತ್ತೆಯೊಂದಿ ಅವಳಿ ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದರು. ಈ ವೇಳೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ತೀವ್ರ ಉಸಿರಾಟದ ಸಮಸ್ಯೆಯಿಂದ ನರಳುತ್ತಿದ್ದ ಯಲ್ಲವ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಯಲ್ಲವ್ವ ಶನಿವಾರ ಸಾವನ್ನಪ್ಪಿದ ಬಗ್ಗೆ ಆಸ್ಪತ್ರೆ ಮತ್ತು ಕುಟುಂಬ ಮೂಲಗಳು ತಿಳಿಸಿವೆ.
ಈ ಬಗ್ಗೆ ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.