March 25, 2026
Wednesday, March 25, 2026
spot_img

ಪತಿ ಟ್ರಿಪ್‌ಗೆ ಕಳಿಸಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಶರಣಾದ ಗೃಹಿಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಯಲ್ಲಿರುವ ಹೆಂಗಸರ ಮಾನಸಿಕ ಸ್ಥಿತಿ ಕಥೆ ಏನು? ಯಾರೊಂದಿಗೂ ಮಾತನಾಡೋದಿಲ್ಲ, ಮನೆಕೆಲಸ, ಟಿವಿ, ಮೊಬೈಲ್‌ನಲ್ಲೇ ಕಾಲ ಕಳೆಯುತ್ತಾರೆ. ಕೆಲವೊಮ್ಮೆ ಜನದ ಬಳಿ ಮಾತನಾಡೋದು ಹೇಗೆ ಅನ್ನೋದನ್ನೇ ಮರೆತಿರುತ್ತಾರೆ. ಮಾನಸಿಕ ನೆಮ್ಮದಿಗೆ ಟ್ರಿಪ್‌ ಅಥವಾ ಸ್ನೇಹಿತೆಯರ ಜೊತೆ ಕಾಲಕಳೆಯೋದು ಮುಖ್ಯ.

ಇಲ್ಲೊಬ್ಬ ಗೃಹಿಣಿ ತನ್ನ ಪತಿ ಟ್ರಿಪ್‌ ಕಳಿಸೋಕೆ ಒಪ್ಪಿಲ್ಲ ಎಂದು ಬೇಸರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಮೈಸೂರಿನಲ್ಲಿ ಈ ಘಟನೆ ನಡೆದಿದೆ. ಸರಸ್ವತಿಪುರಂನ 46 ವರ್ಷದ ಸಂಧ್ಯಾ ಮೃತರು.

ಮನೆಯ ಸೀಲಿಂಗ್‌ ಫ್ಯಾನ್‌ಗೆ ಸಂಧ್ಯಾ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಧ್ಯಾ ಸಂಬಂಧಿಕರು ಮಾತ್ರ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನವರಾದ ಸಂಧ್ಯಾ ಚಾಮರಾಜನಗರದ ರಂಗನಾಥ್‌ರನ್ನು ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ 25 ವರ್ಷ ತುಂಬಿದೆ. ಪುತ್ರಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮಗ ಹಾಗೂ ಪತಿ ಜೊತೆ ಸಂಧ್ಯಾ ಮೈಸೂರಿನಲ್ಲಿ ನೆಲೆಸಿದ್ದರು.

ಪ್ರವಾಸಕ್ಕೆ ಹೋಗುತ್ತೇನೆ ಎಂದು ಸಂಧ್ಯಾ ಹೇಳಿದ್ದಾರೆ. ನಂತರ ಇಬ್ಬರ ಮಧ್ಯೆ ಮಾತಿಗೆ ಮಾತು ನಡೆದಿದೆ. ಪತಿ ಮನೆಯಿಂದ ಹೊರಗೆ ಹೋದ ನಂತರ ಸಂಧ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ನನ್ನ ಅಕ್ಕ ಸಾಯುವವರಲ್ಲ, ಗಂಡ ಹಾಗೂ ಮಗನ ಮೇಲೆ ಅನುಮಾನವಿದೆ ಎಂದು ಸಂಧ್ಯಾ ಸಹೋದರ ಗುರುಮೂರ್ತಿ ದೂರು ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !