March 31, 2026
Tuesday, March 31, 2026
spot_img

SHOCKING | ಗೃಹಿಣಿ ಆತ್ಮಹತ್ಯೆ! ಒಂದೇ ಸಾಂಬಾರ್‌ ಮೂರು ದಿನ ಬಡಿಸಿದ್ದಕ್ಕೆ ಗಂಡನ ಜತೆ ಜಗಳ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾನ್ಯವಾಗಿ ಮನೆಯಲ್ಲಿ ಮಹಿಳೆಯರು ಮಾಡಿದ ಸಾಂಬಾರ್‌ ಖಾಲಿಯಾಗೋವರೆಗೂ ಹೊಸ ಸಾಂಬಾರ್‌ ಮಾಡೋದಿಲ್ಲ. ಮೂರು ದಿನದವರೆಗೂ ಒಂದೇ ಸಾಂಬಾರ್‌ನ್ನು ಬಿಸಿ ಮಾಡಿ ಕೊಟ್ಟಿದ್ದ ವಿಷಯಕ್ಕೆ ಪತಿ ಪತ್ನಿ ನಡುವೆ ಜಗಳ ನಡೆದಿದೆ. ಈ ಜಗಳ ಆತ್ಮಹತ್ಯೆಯಲ್ಲಿ ಕೊನೆಯಾಗಿದೆ.

ಬೆಂಗಳೂರಿನ ನಿವಾಸಿ ಕಾವ್ಯಾ ಹಾಗೂ ರಂಗಸ್ವಾಮಿ ಅನ್ಯೂನ್ಯವಾಗಿಯೇ ಇದ್ದರು. ಇವರಿಗೆ ನಾಲ್ಕು ವರ್ಷದ ಮಗು ಇದೆ. ಮೂರು ದಿನದ ಹಿಂದೆ ಮಾಡಿದ್ದ ಸಾಂಬಾರ್‌ನ್ನು ಕಾವ್ಯ ಮತ್ತೆ ಊಟಕ್ಕೆ ಬಡಿಸಿದ್ದಾರೆ. ಇದೇ ವಿಷಯಕ್ಕೆ ಜಗಳ ಆರಂಭವಾಗಿದೆ.

ಆರಂಭವಾದ ಜಗಳ ವಿಪರೀತವಾಗಿದ್ದು, ಹಲ್ಲೆ ಮಟ್ಟಕ್ಕೂ ಬಂದಿದೆ. ಬೇಸರದಲ್ಲಿ ಕಾವ್ಯಾ ಕೃಷಿ ಬಳಕೆಗಾಗಿ ಇರಿಸಲಾಗಿದ್ದ ಕೀಟನಾಶಕವನ್ನು ಸೇವಿಸಿದ್ದಾರೆ. ಇದ್ದಕ್ಕಿದ್ದಂತೆಯೇ ವಾಂತಿ ಮಾಡಿಕೊಂಡಿದ್ದನ್ನು ನೋಟಿ ಕುಟುಂಬದವರು ಅಲರ್ಟ್‌ ಆಗಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಕಾವ್ಯಾ ಕೊನೆಯುಸಿರೆಳೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !