ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಂಪು ಸಮುದ್ರದಲ್ಲಿ ಮತ್ತೆ ಹೌತಿ ಬಂಡುಕೋರರ ಹಾವಳಿ ಮುಂದುವರೆದಿದ್ದು, ಮತ್ತೊಂದು ಕಾರ್ಗೋ ಶಿಪ್ ಮೇಲೆ ಬಂಡುಕೋರರು ದಾಳಿ ಮಾಡಿದ್ದಾರೆ.
ಕೆಂಪು ಸಮುದ್ರದಲ್ಲಿ ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮಂಗಳವಾರ ತಡರಾತ್ರಿ ಆಯಕಟ್ಟಿನ ಬಾಬ್ ಎಲ್-ಮಂಡೇಬ್ ಜಲಸಂಧಿ ಬಳಿ ತೆರಳುತ್ತಿದ್ದ ಸರಕು ಸಾಗಾಣಿಕೆ ಹಡಗುಗಳ ಮೇಲೆ ಎರಡು ಕ್ಷಿಪಣಿಗಳನ್ನು ಹಾರಿಸಿದ್ದಾರೆ ಎಂದು ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆ ಯುಕೆಎಂಟಿಒ ವರದಿ ಮಾಡಿದೆ.
ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್ ಹಡಗುಗಳು ಎರಿಟ್ರಿಯಾ ಮತ್ತು ಯೆಮೆನ್ ಕರಾವಳಿಗಳ ನಡುವೆ ಸಾಗುತ್ತಿದ್ದಾಗ ಹಡಗಿನ ಬಳಿ ಸ್ಫೋಟಕಗಳು ಬಿದ್ದಿರುವುದಾಗಿ ವರದಿಯಾಗಿದೆ.
ಬ್ರಿಟನ್‌ನ ರಾಯಲ್ ನೇವಿ ನಡೆಸುತ್ತಿರುವ ಸಂಸ್ಥೆಯು ನೀಡಿರುವ ಮಾಹಿತಿಯಂತೆ ಹಡಗು ಮತ್ತು ಸಿಬ್ಬಂದಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಇನ್ನು ಹೌತಿ ಬಂಡುಕೋರರು ದಕ್ಷಿಣ ಕೆಂಪು ಸಮುದ್ರಕ್ಕೆ ಎರಡು ಹಡಗು ನಿಗ್ರಹ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದಾರೆ ಎಂದು ಅಮೆರಿಕಾ ಸೆಂಟ್ರಲ್ ಕಮಾಂಡ್ ಹೇಳಿದೆ.