May 11, 2026
Monday, May 11, 2026
spot_img

ದಿನಭವಿಷ್ಯ: ಸಂಗಾತಿ ಜೊತೆ ಕೋಪ ಮಾಡಿಕೊಂಡು ಏನನ್ನು ಸಾಧಿಸ್ತೀರಿ?

ಮೇಷ
ನಿಮ್ಮ ಕಾರ್ಯದಲ್ಲಿ ದಿನವಿಡೀ ವ್ಯಸ್ತ. ಬೇರೆ ವಿಷಯದಲ್ಲಿ ಮನಸ್ಸು ತೊಡಗದು. ಅಪಥ್ಯ ಆಹಾರ ಸೇವಿಸಿ ಹೊಟ್ಟೆ ಕೆಡುವ ಸಾಧ್ಯತೆ.      
ವೃಷಭ
ಆಪ್ತ ಬಳಗದ ಜತೆ ಕಾಲ ಕಳೆಯುವ ಅವಕಾಶ. ಮಾತಿನಲ್ಲಿ ಕಟುಮಾತು ನುಸುಳದಂತೆ ನೋಡಿಕೊಳ್ಳಿ. ಸಂಬಂಧ ಕೆಡದಂತೆ ಎಚ್ಚರವಿರಲಿ.        
ಮಿಥುನ
ನೀವು ಇಚ್ಛಿಸದ  ಬೆಳವಣಿಗೆ ನಡೆದೀತು.  ಬೇಸರ ಪಡುತ್ತಾ ಕೂರದಿರಿ. ಪರಿಸ್ಥಿತಿಗೆ ಒಗ್ಗಿಕೊಳ್ಳುವುದು ಮುಖ್ಯ. ಧನವ್ಯಯ ಹೆಚ್ಚಲಿದೆ.      
ಕಟಕ
ದೈಹಿಕ ಕ್ಷಮತೆ ಕಾಯ್ದುಕೊಳ್ಳಿ. ಹೆಚ್ಚುವರಿ ಆದಾಯದ ದಾರಿ ಹೊಳೆಯಲಿದೆ. ಕೌಟುಂಬಿಕ ಉದ್ವಿಗ್ನತೆ ಶಮನಕ್ಕೆ ಗಮನ ಕೊಡಿ.    
ಸಿಂಹ
ಸಂಗಾತಿ ಜತೆ ಸಂಘರ್ಷ ನಡೆದೀತು. ಪರಸ್ಪರ ಗೌರವವಿದ್ದರೆ ಪ್ರೀತಿ ಬೆಳೆಯುವುದು. ಉದ್ಯೋಗದ ಅವಕಾಶ ಹೆಚ್ಚಲಿದೆ. ಧನವ್ಯಯ.     ಕನ್ಯಾ
ಸಂಗಾತಿ ಜತೆ ಅಹಂ ಬಿಡಿ. ನಿಮ್ಮದೇ ನಿಲುವು ಹೇರಬೇಡಿ. ಸಂಬಂಧ ಕೆಡಬಹುದು.  ಹಣ ಗಳಿಕೆ ಹೆಚ್ಚಳವಾಗದು. ಇದ್ದುದರಲ್ಲಿ ತೃಪ್ತಿಯಿರಲಿ.      
ತುಲಾ
ಬಿಡುವಿಲ್ಲದ ಕೆಲಸ,  ಒತ್ತಡ, ಹೊಣೆ ಹೆಚ್ಚಳ. ನಿಮ್ಮ ಆಕಾಂಕ್ಷೆ ಈಡೇರಿಸಲು ಹೆಚ್ಚು ಪ್ರಯತ್ನ ಅಗತ್ಯ. ಕೌಟುಂಬಿಕ ಸಾಮರಸ್ಯ.           ವೃಶ್ಚಿಕ
ಕುಟುಂಬದ ಜತೆ ಪ್ರಯಾಣ ಸಾಧ್ಯತೆ. ವೃತ್ತಿ ಕೆಲಸ ಮುಗಿಸಿರಿ. ನಿಮ್ಮ ಕಟು ಮಾತಿನಿಂದ ಆಪ್ತರು ದೂರವಾದಾರು. ಹೆಚ್ಚು ಹಣ ಗಳಿಕೆ ಅವಕಾಶ.                
ಧನು
ನಿಮ್ಮ ಮನಸ್ಥಿತಿ. ಇತರರ ಜತೆ ಹಂಚಿಕೊಳ್ಳಲು ಬಯಸುವಿರಿ. ಆದರೆ ಸೂಕ್ತ ಸ್ಪಂದನೆ ದೊರಕದು. ದಂಪತಿ ಮಧ್ಯೆ ವಿರಸ ಮೂಡೀತು. ಹೊಂದಾಣಿಕೆಯಿರಲಿ.      
ಮಕರ
ಇಂದು ಪ್ರಮುಖ ಬೆಳವಣಿಗೆ ಸಂಭವ. ಅನವಶ್ಯ ವಾಗ್ವಾದದಿಂದ ಆದಷ್ಟು ದೂರವಿರಿ. ಪ್ರತಿ ವಿಷಯದಲ್ಲಿ ಸಂಯಮ ಅತ್ಯವಶ್ಯ.          
ಕುಂಭ
ವೃತ್ತಿಯ ಒತ್ತಡ ಎಂದಿಗಿಂತ ಹೆಚ್ಚು. ಏಕಾಗ್ರತೆ ಕಳಕೊಳ್ಳದಿರಿ. ವೈವಾಹಿಕ ಬದುಕಲ್ಲಿ ಒಡಕು ಮೂಡದಂತೆ ಎಚ್ಚರಿಕೆ ವಹಿಸಿರಿ.         ಮೀನ
ಏಕತಾನತೆಯ ಕೆಲಸ ನಿಮ್ಮ ಉತ್ಸಾಹ ಕುಗ್ಗಿಸುವುದು. ಮನಸ್ಸು ಉಲ್ಲಸಿತಗೊಳಿಸುವ ಹವ್ಯಾಸ ಬೆಳೆಸಿಕೊಳ್ಳಿ. ಬಂಧುಗಳ ಸಹಕಾರ.  

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !