ಹೇಗೀದ್ದೀರಿ ಸರ್…ಆರು ವರ್ಷಗಳ ನಂತರ ಗುರುವನ್ನು ಭೇಟಿಯಾದ ಶಿಷ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನುವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ, ದೇವೇಗೌಡರನ್ನು ನೋಡುತ್ತಿದ್ದಂತೆ ಕೈಮುಗಿದು ಹೇಗಿದ್ದೀರಿ ಸರ್ ಎಂದು ಆರೋಗ್ಯ ವಿಚಾರಿಸಿದ್ದಾರೆ.
ವಿಧಾನಮಂಡಲ ಕಲಾಪ ಮುಗಿದ ನಂತರ ಸಿದ್ದರಾಮಯ್ಯ ಅವರು ಶಾಸಕರಾದ ಜಮೀರ್ ಅಹಮದ್, ಭೈರತಿ ಸುರೇಶ್ ಮೊದಲಾದವರ ಜೊತೆಗೆ ದೇವೇಗೌಡರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.
ಆರು ವರ್ಷಗಳ ನಂತರ ಸಿದ್ದರಾಮಯ್ಯ, ದೇವೇಗೌಡರು ಭೇಟಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!