ಅಡುಗೆ ಮಾಡುವಾಗ ಚಾಕುವಿನಿಂದಾದ ಸಣ್ಣ ಕಟ್‌ಗೂ, ಸೈಲ್‌ನಿಂದ ಬಿದ್ದು ಆದ ಸಣ್ಣ ಗಾಯಕ್ಕೂ ಬ್ಯಾಂಡೇಡ್ ಹಾಕದೇ ಇರೋದು ಅಸಾಧ್ಯ, ಗಾಯಗಳಿಗೆ ಬ್ಯಾಂಡೇಡ್ ಹಾಕೋದು ಯಾಕೆ? ಇದು ಹೇಗೆ ಕೆಲಸ ಮಾಡುತ್ತದೆ?
ಬ್ಯಾಂಡೇಡ್ ನಿಮ್ಮ ಗಾಯಕ್ಕೆ ರಕ್ಷಣೆ ನೀಡುತ್ತದೆ. ಗಾಳಿ, ಧೂಳು, ಬ್ಯಾಕ್ಟೀರಿಯಾದಿಂದ ನಿಮ್ಮ ಗಾಯವನ್ನು ರಕ್ಷಿಸುತ್ತದೆ. ಇದರಿಂದಾಗಿ ನಿಮ್ಮ ದೇಹಕ್ಕೆ ಗಾಯವನ್ನು ವಾಸಿಮಾಡಲು ಸಮಯ ಸಿಗುತ್ತದೆ. ಇಷ್ಟೆ ಅಲ್ಲ ಕೆಲವು ಬ್ಯಾಂಡೇಡ್‌ಗಳಲ್ಲಿ ಆಂಟಿಸೆಪ್ಟಿಕ್ ಗುಣಗಳಿವೆ, ಇವು ಗಾಯದ ಎರಡು ತುದಿಯನ್ನು ಕೂಡಿಸಿ ಇಟ್ಟುಕೊಂಡು ಬೇಗ ವಾಸಿಯಾಗುವಂತೆ ಮಾಡುತ್ತವೆ.