ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರು ತುಂಬಿದ ಮಾರುಕಟ್ಟೆಯಲ್ಲಿ ಅಮ್ಮನ ಕೈ ಹಿಡಿದು ಹೋಗ್ತಾ ಇದ್ದ ಪುಟ್ಟ ಕಂದಮ್ಮನ ಮೈಮೇಲೆ ಮಹಡಿಯಿಂದ ಏಕಾಏಕಿ ನಾಯಿಯೊಂದು ಬಿದ್ದು ಬಾಲಕಿ ಮೃತಪಟ್ಟಿದ್ದಾಳೆ.
ಥಾಣೆಯಲ್ಲಿರುವ ಮುಂಬ್ರಾದ ಅಮೃತ್ನಗರದಲ್ಲಿ ತಾಯಿಯ ಕೈ ಹಿಡಿದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ಐದನೇ ಮಹಡಿಯಿಂದ ನಾಯಿ ಬಿದ್ದ ಪರಿಣಾಮ ತಕ್ಷಣವೇ ಬಾಲಕಿ ಮೃತಪಟ್ಟಿದ್ದಾಳೆ.
ಅಮೃತ್ ನಗರದಲ್ಲಿನ ಚಿರಾಗ್ ಮೇಸನ್ ಕಟ್ಟಡದಿಂದ ನಾಯಿ ಬಿದ್ದಿದೆ. ತಾಯಿ ಬಾಲಕಿಯನ್ನು ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ವೇಳೆ ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ. ನಾಯಿಯೂ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ನಾಯಿ ಬಾಲಕಿ ಮೇಲೆ ಬಿದ್ದಾಗ, ಆಕೆ ಸಂಪೂರ್ಣವಾಗಿ ಪ್ರಜ್ಞಾಹೀನಳಾದಳು. ನಾಯಿ ಕೂಡ ಕೆಲಕಾಲ ಪ್ರಜ್ಞೆ ತಪ್ಪಿತ್ತಾದರೂ ನಂತರ ಎದ್ದು ನಿಂತಿತು. ನಾಯಿ ಆಕಸ್ಮಿಕವಾಗಿ ಬಿದ್ದಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಎಸೆಯಲಾಗಿದೆಯೇ ಎಂದು ತಿಳಿಯಲು ಮುಂಬ್ರಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.