FOOD | ಈ ಸೀಸನ್‌ನಲ್ಲಿ ಮಲೆನಾಡಿನ ಸ್ಪೆಷಲ್‌ ಹಲಸಿನ ಕಡುಬು ಮಾಡದೇ ಇದ್ರೆ ಹೇಗೆ?

ಸಾಮಾಗ್ರಿಗಳು
ಹಲಸಿನ ಹಣ್ಣು ಒಂದು ಲೋಟ
ಅಕ್ಕಿ ಒಂದು ಲೋಟ
ಏಲಕ್ಕಿ ಒಂದು
ಕಾಯಿತುರಿ ಅರ್ಧ ಲೋಟ
ಒಂದು ಲೋಟ ಬೆಲ್ಲ

ಮಾಡುವ ವಿಧಾನ
ಮೊದಲು ಒಂದು ದಿನ ಮುನ್ನವೇ ಅಕ್ಕಿ ನೆನೆಸಿ ಇಟ್ಟುಕೊಳ್ಳಿ
ನಂತರ ಮಿಕ್ಸಿಗೆ ಮೊದಲು ಹಲಸಿನ ಹಣ್ಣನ್ನು ಹಾಕಿ ರುಬ್ಬಿ, ಇದಕ್ಕೆ ನೀರು ಬೇಡ
ನಂತರ ಅದೇ ಮಿಕ್ಸಿಗೆ ಅಕ್ಕಿ, ಬೆಲ್ಲ, ಏಲಕ್ಕಿ ಹಾಕಿ ರುಬ್ಬಿ
ನುಣ್ಣಗಾದ ನಂತರ ಇದಕ್ಕೆ ಕಾಯಿತುರಿ ಹಾಕಿ ಇನ್ನಷ್ಟು ನುಣ್ಣಗೆ ರುಬ್ಬಿ
ನಂತರ ಒಂದು ಲೋಟಕ್ಕೆ ತುಪ್ಪ ಸವರಿ ಹಿಟ್ಟು ಹಾಕಿ
ಇಡ್ಲಿ ಪಾತ್ರೆಯಲ್ಲಿ 15 ನಿಮಿಷ ಬೇಯಿಸಿದ್ರೆ ಕಡುಬು ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!