September 27, 2026
Sunday, September 27, 2026
spot_img

ತಿಂಡಿ ಆದ ನಂತರ ಒಂದೊಳ್ಳೆ ಇರಾನಿ ಚಾಯ್‌ ಕುಡಿಯದಿದ್ರೆ ಹೇಗೆ? ಇಲ್ಲಿದೆ ಸಿಂಪಲ್‌ ರೆಸಿಪಿ

ಇರಾನಿ ಚಾಯ್‌ ಅನ್ನೋದು ಬರೀ ಟೀ ಅಷ್ಟೆ ಅಲ್ಲ ಅದೊಂದು ಫೀಲಿಂಗ್‌! ಹೌದು, ನಿತ್ಯವೂ ಅಲ್ಲವಾದ್ರೂ ಅಪರೂಪಕ್ಕೊಮ್ಮೆಯಾದ್ರೂ ಈ ಚಹಾ ಕುಡಿಯೋದಕ್ಕೆ ಕ್ರೇವಿಂಗ್ಸ್‌ ಆಗೋದು ಖಂಡಿತ. ಆದರೆ ಈ ಟೀ ಹುಡುಕಿಕೊಂಡು ಹೋಗಿ ಕುಡಿದು ಬರೋಕಿಂತ ಮನೆಯಲ್ಲೇ ಮಾಡಿಕೊಳ್ಳೋದು ಲೇಸು. 20 ನೇ ಶತಮಾನದ ಆರಂಭದಲ್ಲಿ ಇರಾನ್‌ನಿಂದ ಭಾರತಕ್ಕೆ ವಲಸೆ ಬಂದ ಜನರು ಈ ಚಾಯ್‌ನ್ನು ದೇಶಕ್ಕೆ ಪರಿಚಯಿಸಿದ್ದಾರೆ ಎನ್ನಲಾಗುತ್ತದೆ. ಬನ್ನಿ ಹಾಗಾದ್ರೆ ಈ ಟೀ ಹೇಗೆ ಮಾಡೋದು? ನಮ್ಮ ಟೀಗೂ ಇರಾನಿ ಚಾಯ್‌ಗೂ ಏನು ವ್ಯತ್ಯಾಸ ನೋಡೋಣ.

ಸಾಮಾಗ್ರಿಗಳು

ಹಾಲು
ಟೀ ಪುಡಿ
ಏಲಕ್ಕಿ
ಸಕ್ಕರೆ

ಮಾಡುವ ವಿಧಾನ

ಒಂದು ಲೋಟ ನೀರಿಗೆ ಏಲಕ್ಕಿ ಪುಡಿ ಹಾಗೂ ಸಕ್ಕರೆಯನ್ನು ಸೇರಿಸಿ ಕುದಿಸಿ

ನಂತರ ಇದನ್ನು ಶೋಧಿಸಿ ಡಿಕಾಕ್ಷನ್‌ ತೆಗೆದು ಎತ್ತಿಡಿ.

ಆನಂತರ ಇನ್ನೊಂದು ಪಾತ್ರೆಗೆ ಹಾಲನ್ನು ಹಾಕಿ. ಒಂದು ಲೋಟ ಟೀ ಬೇಕಾದರೆ ಒಂದೂವರೆ ಲೋಟದಷ್ಟು ಹಾಲನ್ನು ಹಾಕಬೇಕು. ಈ ಹಾಲನ್ನು ಸಣ್ಣ ಉರಿಯಲ್ಲಿ ಕುದಿಸಬೇಕು. ಹಾಲು ಇಂಗಿ ಕೆನೆ ಬರುವವರೆಗೂ ಕಾಯಬೇಕು.

ಕೆನೆ ಬಂದಿರುವ ಹಾಲನ್ನು ಲೋಟಕ್ಕೆ ಹಾಕಿ, ಈ ಹಾಲನ್ನು ಸೋಸುವಂತಿಲ್ಲ. ಆನಂತರ ಮಾಡಿಟ್ಟುಕೊಂಡಿದ್ದ ಡಿಕಾಕ್ಷನ್‌ ಹಾಕಿ ಬಿಸಿ ಬಿಸಿ ಚಹಾ ಸವಿಯಿರಿ.

ಕೆನೆಯ ಸಮೇತ ಗಟ್ಟಿ ಹಾಲನ್ನು ಹಾಕುವುದು ಈ ಚಹಾದ ವಿಶೇಷತೆ. ಕೆಲವರು ಹಾಲಿಗೆ ಕಂಡೆನ್ಸ್‌ ಮಿಲ್ಕ್‌ ಕೂಡ ಹಾಕುತ್ತಾರೆ. ಅದು ಟೀ ರುಚಿಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ.

Must Read