ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಭೆ ಕೋಮುಗಲಭೆ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕುರುಬ ಸಮಾವೇಶದಲ್ಲಿ ಸಿಎಂ ಪಾಲ್ಗೊಂಡಿದ್ದು, ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.
ಶಿವಮೊಗ್ಗದಲ್ಲಿ ನಡೆದಿದ್ದು ಕೋಮು ಗಲಭೆ ಅಲ್ಲ, ಗಲಾಟೆಗೆ ಕೋಮು ಗಲಭೆ ಹೆಸರು ಕೊಡಬೇಡಿ. ಯಾರೋ ನಾಲ್ಕು ಜನ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅವರನ್ನು ಜೈಲಿಗಟ್ಟಿದ್ದು ಆಗಿದೆ. ಕೋಮು ಗಲಭೆಗೆ ಸರ್ಕಾರ ಪ್ರಚೋದನೆ ಕೊಟ್ಟಿದ ಎಂದು ಬಿಜೆಪಿ ಹೇಳ್ತಿದೆ. ಇದೆಲ್ಲಾ ರಾಜಕೀಯ, ಅವರಿಗೆ ಆರೋಪ ಮಾಡೋದು ಬಿಟ್ಟು ಇನ್ನೇನು ಗೊತ್ತು? ಎಂದಿದ್ದಾರೆ.