ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲಪ್ರದೇಶದಲ್ಲಿ ಭಾರೀ ಸುದಿಯಾಗಿದ್ದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ತಂದಿದ್ದ ಸಮೋಸ ವಿಚಾರ ಇದೀಗ ಸಿಐಡಿ (CID) ತನಿಖೆವರೆಗೂ ಹೋಗಿದೆ.
ಮುಖ್ಯಮಂತ್ರಿಗೆ ತಂದಿದ್ದ ಸಮೋಸವನ್ನು ಭದ್ರತಾ ಸಿಬ್ಬಂದಿಗೆ ನೀಡಿದ್ದು, ಸಿಐಡಿ ಕೂಡ ಈ ಘಟನೆಯನ್ನು ಸರ್ಕಾರಿ ವಿರೋಧಿ ಕೃತ್ಯ ಎಂದು ಹೇಳಿ ಮತ್ತಷ್ಟು ಅಚ್ಚರಿ ಮೂಡಿಸಿದೆ.
ಅಷ್ಟಕ್ಕೂ ಈ ಘಟನೆ ನಡೆದಿದ್ದು ರೋಚಕ,ಹಿಮಾಚಲ ಪ್ರದೇಶ ಸಿಐಡಿ ಕಚೇರಿಯಲ್ಲಿ ಮುಖ್ಯ ಸಭೆ ಆಯೋಜಿಸಲಾಗಿತ್ತು. ಹಿಮಾಚಲ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಈ ಸಭೆಯಲ್ಲಿ ಪಾಲ್ಗೊಂಡು ಪ್ರಮಖ ವಿಚಾರಗಳ ಕುರಿತು ಚರ್ಚಿಸಲು ಮೀಟಿಂಗ್ ಆಯೋಜಿಸಲಾಗಿತ್ತು. ಸಿಐಡಿ ಅಧಿಕಾರಿಗಳು ಸೇರಿದಂತೆ ಸರ್ಕಾರದ ಕಾರ್ಯದರ್ಶಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಮುಖ್ಯಮಂತ್ರಿ ಆಗಮನದ ಕಾರಣ ಸಿಐಡಿ ಅಧಿಕಾರಿಗಳು ಸಭೆ ಚಹಾ ಕೂಟಕ್ಕೆ ಸಮೋಸಾ ಹಾಗೂ ಇತರ ಕೆಲ ತಿನಿಸುಗಳನ್ನು ತರಿಸಲಾಗಿತ್ತು. ಸಭೆ ಮುಗಿದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಸಿಐಡಿ ಅಧಿಕಾರಿಗಳಿಗೆ ಚಹಾ ನೀಡಲಾಯಿತು. ಈ ವೇಳೆ ತಂದಿದ್ದ ಸಮೋಸಾ ನಾಪತ್ತೆಯಾಗಿದೆ. ಎಷ್ಟೇ ಹುಡುಕಾಡಿದರೂ ಸಮೋಸ ಪತ್ತೆಯಾಗಿಲ್ಲ. ಆಕ್ರೋಶಗೊಂಡ ಹಿಮಾಚಲ ಪ್ರದೇಶ ಸಿಬಿಐ ಡೈರೆಕ್ಟರ್ ಜನರಲ್ ಸಂಜೀವ್ ರಂಜನ್ ಓಜಾ ತನಿಖೆಗೆ ಸೂಚಿಸಿದ್ದಾರೆ.
ಸುಖ್ವಿಂದರ್ ಸಿಂಗ್ ಸಿಖುಗೆ ತಂದಿದ್ದ ಸಮೋಸ್ ತಿಂದಿದ್ದು ಯಾರು? ತನಿಖೆ ಚುರುಕುಗೊಂಡಿದೆ. ಸಿಸಿಟಿವಿ ಪರಿಶೀಲನೆ ಆರಂಭಗೊಂಡಿದೆ. ಸಮೋಸಾವನ್ನು ಪೊಲೀಸರು ತಿಂದಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಈ ವಿಚಾರ ಮಾಧ್ಯಮದ ಮೂಲಕ ಬಹಿರಂಗವಾಗಿತ್ತು. ಟ್ರೋಲ್, ಟೀಕೆ ಎದುರಿಸಲು ಆರಂಭಗೊಂಡಿತ್ತು.
ಅಷ್ಟೊತ್ತಿಗೆ ಸಂಜೀವ್ ರಂಜನ್ ಓಜಾ ಪ್ರತಿಕ್ರಿಯೆ ನೀಡಿದ್ದಾರೆ.ಇದು ಆಂತರಿಕ ವಿಚಾರ. ಸರ್ಕಾರ ಇಲ್ಲಿ ತನಿಖೆಗೆ ಆದೇಶಿಸಿಲ್ಲ. ತಂದಿದ್ದ ಸಮೋಸಾ ನಾಪತ್ತೆಯಾಗಿದ್ದು ಹೇಗೆ ಎಂದು ಕೇಳಿದ್ದೇವೆ. ಆತಂರಿಕವಾಗಿ ಹೇಗೆ ಅನ್ನೋ ವಿಚಾರವನ್ನು ಕೇಳಲಾಗಿದೆ.ಆತಂರಿಕ ವಿಚಾರಣೆಯಲ್ಲಿ ಸರ್ಕಾರದ ಪಾತ್ರ ಇಲ್ಲ. ಸುಖ್ವಿಂದರ್ ಸಿಂಗ್ ಸುಖು ಸಮೋಸಾ ತಿನ್ನುವುದಿಲ್ಲ. ಈ ವಿಚಾರವನ್ನು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಿ ರಾಜೀಯಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.