ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ನಿರಂತರ ಜೀವ ಬೆದರಿಕೆ ಬರುತ್ತಿದ್ದು, ಹತ್ಯೆಗೆ ಸ್ಕೆಚ್ ಹಾಕಲಾಗುತ್ತಿದ್ದೆ ಎಂದು ಹೇಳಲಾಗುತ್ತಿದೆ.
ಇತ್ತ ನಿಕಟವರ್ತಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಹತ್ಯೆ ಕೂಡ ನಡೆದಿದೆ. ಈ ಕಾರಣದಿಂದ ಸಲ್ಮಾನ್ ಖಾನ್ ಅವರ ಆಪ್ತರಿಗೆ, ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಆತಂಕ ಹೆಚ್ಚಾಗಿದೆ.
ಇದೇ ಸಮಯದಲ್ಲಿ, ಸಲ್ಮಾನ್ ‘ಸಿಕಂದರ್’ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಇಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.
ಜೀವ ಬೆದರಿಕೆ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ರಕ್ಷಣೆಗೆ 70 ಮಂದಿಯನ್ನು ನೇಮಕ ಮಾಡಲಾಗಿದೆ. ನಾಲ್ಕು ಲೇಯರ್ಗಳ ಭದ್ರತೆ ನೀಡಲಾಗಿದೆ. ಶೂಟಿಂಗ್ ಹೋಟೆಲ್ ಒಂದರಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಭದ್ರತಾ ಸಿಬ್ಬಂದಿ ಹೋಟೆಲ್ ಅನ್ನು ಸುಪರ್ದಿಗೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇದಾಗಲೇ ಸರ್ಕಾರದ ವತಿಯಿಂದ ಸಲ್ಮಾನ್ ಖಾನ್ ಗೆ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಅಂದರೆ ಸುಮಾರು 25 ಭದ್ರತಾ ಸಿಬ್ಬಂದಿ ಇಲ್ಲಿಯವರೆಗೆ ಅವರ ರಕ್ಷಣೆಗೆ ನಿಂತಿದ್ದರು. ಇದೀಗ ಆ ಸಂಖ್ಯೆಯನ್ನು 70ಕ್ಕೆ ಏರಿಸಲಾಗಿದೆ. ಸರ್ಕಾರದ ವತಿಯಿಂದ ಕೊಟ್ಟಿರುವ ರಕ್ಷಣೆಯಲ್ಲಿ 2 ರಿಂದ 4 ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ. ಅವರು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಈ ತಂಡವು ಬುಲೆಟ್ ಪ್ರೂಫ್ ಸೇರಿದಂತೆ ಎರಡರಿಂದ ಮೂರು ವಾಹನಗಳನ್ನು ಬಳಸುತ್ತದೆ. ಈ ಭದ್ರತೆಯ ವೆಚ್ಚ ಪ್ರತಿ ತಿಂಗಳು ಸುಮಾರು 12 ಲಕ್ಷ ರೂಪಾಯಿಗಳನ್ನು ಸರ್ಕಾರ ಖರ್ಚು ಮಾಡುತ್ತಿದೆ.
ಅಂದರೆ ವರ್ಷಕ್ಕೆ ಸುಮಾರು ಒಂದೂವರೆಯಿಂದ ಎರಡು ಕೋಟಿ ರೂಪಾಯಿ ಸರ್ಕಾರದ ಬೊಕ್ಕಸದಿಂದ ಸಲ್ಮಾನ್ ರಕ್ಷಣೆ ನೀಡಲಾಗುತ್ತಿದೆ. ಇದನ್ನು ಹೊರತು ಪಡಿಸಿದರೆ, ಅವರ ವೈಯಕ್ತಿಕ ಸಿಬ್ಬಂದಿ ವೇತನ ಎಲ್ಲಾ ಸೇರಿದರೆ ಒಟ್ಟು ವೆಚ್ಚವು ಮೂರು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಆಗಿರುವ ಶೇರ ಅವರು ಅತ್ಯುತ್ತಮ ಬಾಡಿಗಾರ್ಡ್ಗಳನ್ನು ಆಯ್ಕೆ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಸುದ್ದಿ ಆಗಿದೆ. ಎಲ್ಲೆಡೆ ಕಣ್ಗಾವಲು ಇಡಲಾಗಿದೆ.