Saturday, April 1, 2023

Latest Posts

ಹೃದಯಾಘಾತದಿಂದ ಬದುಕುಳಿದದ್ದು ಹೇಗೆ?: ಮೊದಲ ಬಾರಿ ಮಾತನಾಡಿದ ಬಾಲಿವುಡ್ ನಟಿ ಸುಶ್ಮಿತಾ ಸೇನ್!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಕೆಲವೇ ದಿನಗಳ ಹಿಂದೆ ಬಾಲಿವುಡ್ (Bollywood) ನಟಿ ಸುಶ್ಮಿತಾ ಸೇನ್ (Sushmitha Sen) ಅವರಿಗೆ ಹೃದಯಾಘಾತವಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ನಟಿ ತಿಳಿಸಿದ್ದರು. ಇದೀಗ ತಮ್ಮ ಆರೋಗ್ಯದ ಕುರಿತು ಮಾಹಿತಿ ನೀಡಿದ್ದಾರೆ.
ಹೃದಯಾಘಾತ ಆದ ಬಳಿಕ ಮೊದಲ ಬಾರಿಗೆ ಸುಶ್ಮಿತಾ ಸೇನ್ ಲೈವ್‌ಗೆ ಬಂದಿದ್ದಾರೆ. ಹೃದಯಾಘಾರದಿಂದ ಬದುಕುಳಿದ ಬಗ್ಗೆ ನಟಿ ಮಾತನಾಡಿದ್ದಾರೆ.

ಸಾಕಷ್ಟು ಸೆಲೆಬ್ರಿಗಳು ಇತ್ತೀಚಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜಿಮ್‌ಗೆ ಹೋಗಿ ಫಿಟ್ ಆಗಿದ್ದರೂ ಕೂಡ ಹಾರ್ಟ್ ಆಟ್ಯಾಕ್‌ನಿಂದ (Heart Attack) ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅದೆಷ್ಟೋ ಮಂದಿ ಜಿಮ್- ವರ್ಕೌಟ್ ಬಗ್ಗೆ ದೂರಿದ್ದುಯಿದೆ .ಆದ್ರೆ ನಿಮ್ಮಲ್ಲಿ ಬಹುತೇಕ ಜನರು ಜಿಮ್‌ಗೆ ಹೋಗೋದನ್ನು ನಿಲ್ಲಿಸುತ್ತೀರಿ ಅಂತ ನನಗೆ ಗೊತ್ತು. ಜಿಮ್‌ಗೆ ಹೋದರೂ ಆಕೆಗೆ ಏನೂ ಉಪಯೋಗ ಆಗಲಿಲ್ಲ ನೋಡು ಅಂತ ಮಾತಾಡಿಕೊಳ್ತೀರಿ. ಆದರೆ ಅದು ಸರಿಯಲ್ಲ. ವರ್ಕೌಟ್ ಮಾಡುವುದು ನನಗೆ ಉಪಯೋಗಕ್ಕೆ ಬಂದಿದೆ. ನಾನು ಬದುಕುಳಿದಿದ್ದು ಭೀಕರ ಹೃದಯಾಘಾತದಿಂದ. ನನ್ನ ಹೃದಯದಲ್ಲಿ ಶೇಕಡ 95ರಷ್ಟು ಬ್ಲಾಕೇಜ್ ಇತ್ತು. ನನ್ನ ಜೀವನದಲ್ಲಿ ಕ್ರಿಯಾಶೀಲತೆ ಇದ್ದಿದ್ದರಿಂದಲೇ ನಾನು ಬದುಕಿದೆ ಎಂದಿದ್ದಾರೆ.

ಸರ್ಜರಿ ಬಳಿಕ ಅವರು ಸಾಕಷ್ಟು ಚೇತರಿಸಿಕೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ತಮಗೆ ಸಹಾಯ ಮಾಡಿದ ಎಲ್ಲರಿಗೂ ಸುಶ್ಮಿತಾ ಸೇನ್ ಧನ್ಯವಾದ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!