Monday, September 25, 2023

Latest Posts

ಗರ್ಭಿಣಿಯರನ್ನು ನೋಡಿದ ಹಾವುಗಳಿಗೆ ಕಣ್ಣೇ ಕಾಣೋದಿಲ್ವಂತೆ! ಇದು ನಿಜವಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗರ್ಭಿಣಿಯರನ್ನು ನೋಡಿದ ಮೇಲೆ ಹಾವುಗಳಿಗೆ ಕಣ್ಣು ಕಾಣೋದಿಲ್ವಂತೆ..ಇದು ಸತ್ಯವಾ ಅಥವಾ ಬರೀ ಮುಢನಂಬಿಕೆಯೇ? ಇದೆಲ್ಲದರ ಕುತೂಹಲಕಾರಿ ಸಂಗತಿಗಳ ಬಗ್ಗೆ ತಿಳಿಯೋಣ.

ಈ ವಿಷಯಗಳನ್ನು ತಿಳಿದುಕೊಳ್ಳುವ ಮೊದಲು, ಒಂದು ಪುರಾಣವನ್ನು ತಿಳಿದುಕೊಳ್ಳಬೇಕು. ಅದುವೇ ‘ಬ್ರಹ್ಮ ವೈವರ್ತ ಪುರಾಣ’. ಹಿಂದು ಧರ್ಮದಲ್ಲಿರುವ ವಿಷ್ಣು ಪುರಾಣ, ಶಿವ ಪುರಾಣ, ಮಾರ್ಕಂಡೇಯ ಪುರಾಣ, ಮತ್ಸ್ಯಪುರಾಣ, ಸ್ಕಂದ ಪುರಾಣ, ಗರುಡಪುರಾಣ ಹೀಗೆ ಹಲವು ಇವೆ. ಪುರಾಣಗಳಲ್ಲಿ ಉಪಪುರಾಣಗಳೂ ಇವೆ. ಅದರಲ್ಲಿ ‘ಬ್ರಹ್ಮ ವೈವರ್ತ ಪುರಾಣಂ’ ಕೂಡ ಒಂದು. ಈ ಪುರಾಣವು 18,000 ಶ್ಲೋಕಗಳನ್ನು ಹೊಂದಿದೆ. ಈ ಪುರಾಣವು ಮುಖ್ಯವಾಗಿ ರಾಧಾ ಕೃಷ್ಣನ ಸುತ್ತ ಕೇಂದ್ರೀಕೃತವಾಗಿದೆ.

ಈ ಬ್ರಹ್ಮ ವೈವರ್ತ ಪುರಾಣ’ದ ಪ್ರಕಾರ ಗರ್ಭಿಣಿಯರಿಗೆ ಹಾವು ಕಚ್ಚುವುದಿಲ್ಲವಂತೆ, ಇದಕ್ಕೆ ಕಾರಣ ಗರ್ಭಿಣಿ ನಾಗ ಜನಾಂಗಕ್ಕೆ ನೀಡಿದ ಶಾಪ ಎನ್ನಲಾಗಿದೆ. ವೈಜ್ಞಾನಿಕವಾಗಿ ಹೇಳುವುದಾದರೆ..ನೈಸರ್ಗಿಕವಾಗಿ ಹಾವುಗಳಿಗೆ ಕೆಲವು ವಿಶೇಷ ಇಂದ್ರಿಯಗಳನ್ನು ಗುರುತಿಸುವ ಶಕ್ತಿಯನ್ನು ನೀಡಲಾಯಿತು. ಹಾವುಗಳು ಪತ್ತೆ ಮಾಡುವ ವಿಶೇಷ ಇಂದ್ರಿಯಗಳನ್ನು ಹೊಂದಿವೆ. ಆ ಕಾರಣದಿಂದ, ಹಾವುಗಳು ಹೆಂಗಸರು ಗರ್ಭಿಣಿಯರೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡುತ್ತವೆ. ಗರ್ಭಧಾರಣೆಯ ನಂತರ ಮಹಿಳೆಯರ ದೇಹದಲ್ಲಿ ಕೆಲವು ವಿಶೇಷ ಅಂಶಗಳು ರೂಪುಗೊಳ್ಳುತ್ತವೆ. ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿವೆ. ಹಾವುಗಳು ಇಂತಹ ವಿಷಯಗಳನ್ನು ಸುಲಭವಾಗಿ ಪತ್ತೆ ಮಾಡುತ್ತವೆ. ಆದ್ದರಿಂದಲೇ ಗರ್ಭಿಣಿಯರನ್ನು ಕಂಡರೆ ಹಾವುಗಳು ಕಚ್ಚೋದಿಲ್ಲವಂತೆ. ಇದು ಕೇಳಲು ವಿಷಯ ವಿಚಿತ್ರ..ಆಶ್ಚರ್ಯವಾದರೂ ಸತ್ಯ. ಇದಕ್ಕೆ ಕಾರಣಗಳು..ಸಂಪೂರ್ಣ ವಿವರಗಳು ಬ್ರಹ್ಮ ವೈವರ್ತ ಪುರಾಣದಲ್ಲಿದೆ.

ನಾಗ ಕುಲಕ್ಕೆ ಗರ್ಭಿಣಿ ಶಾಪ..!
ಬ್ರಹ್ಮ ವೈವರ್ತ ಪುರಾಣದ ಪ್ರಕಾರ..ಒಮ್ಮೆ ಗರ್ಭಿಣಿಯೊಬ್ಬರು ಶಿವನ ದೇವಾಲಯದಲ್ಲಿ ಕುಳಿತು ಶಿವನನ್ನು ಕುರಿತು ತಪಸ್ಸು ಮಾಡುತ್ತಿದ್ದಾಗ ಎರಡು ಹಾವುಗಳು ದೇವಾಲಯವನ್ನು ಪ್ರವೇಶಿಸಿದವು. ಆದರೆ ತಪೋದೀಕ್ಷೆಯಲ್ಲಿ ಮಗ್ನಳಾದ ಗರ್ಭಿಣಿಗೆ ಅವುಗಳನ್ನು ಗುರುತಿಸಲೇ ಇಲ್ಲ.  ಸ್ವಲ್ಪವೂ ಕದಲದೆ ತಪೋದೀಕ್ಷೆಯಲ್ಲಿ ಮಗ್ನಳಾದ ಆಕೆಯನ್ನು ವಿವಿಧ ರೀತಿಯಲ್ಲಿ ತೊಂದರೆ ಕೊಟ್ಟು ತಪಸ್ಸನ್ನು ಮುರಿದವು. ಇದರಿಂದ ಕೋಪಗೊಂಡ ಗರ್ಭಿಣಿ ಇನ್ನು ಮುಂದೆ ಗರ್ಭಿಣಿಯರ ಬಳಿಗೆ ಹೋಗುವ ಹಾವಿಗೆ ಕಣ್ಣು ಕಾಣದಂತಾಗಲಿ ಎಂದು ಇಡೀ ನಾಗ ಜನಾಂಗಕ್ಕೆ ಶಪಿಸಿದಳಂತೆ. ಅಂದಿನಿಂದ ಹಾವುಗಳು ಗರ್ಭಿಣಿಯರನ್ನು ನೋಡಿದರೆ ಕಣ್ಣು ಕಾಣುವುದಿಲ್ಲ ಎಂಬ ಮಾತಿದೆ.

ಹೆಂಡತಿ ಗರ್ಭಿಣಿಯಾಗಿದ್ದರೆ ಪತಿ ಹಾವುಗಳನ್ನು ಕೊಲ್ಲಬಾರದು ಎಂದು ಹೇಳಲಾಗುತ್ತದೆ. ಈ ರೀತಿ ಕೊಂದರೆ ಹುಟ್ಟಿದ ಮಗುವಿಗೆ ನಾಗದೋಷ ಬರುತ್ತದೆ ಎಂತಲೂ ಹೇಳುತ್ತಾರೆ. ಆದರೂ ಇದನ್ನೇ ನಂಬಿ ಗರ್ಭಿಣಿಯರು ಹಾವುಗಳ ಬಗ್ಗೆ ಅಜಾಗರೂಕರಾಗಿರುವುದು ಒಳ್ಳೆಯದಲ್ಲ. ಮುನ್ನೆಚ್ಚರಿಕೆ ವಹಿಸುವ ಅವಶ್ಯಕತೆಯಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!