August 24, 2026
Monday, August 24, 2026
spot_img

ದುಬಾರಿಯಾದ ವಸ್ತುಗಳನ್ನು ಮಕ್ಕಳು ಒಡೆದು ಹಾಕಿದ್ರೆ ನೀವು ಹೇಗೆ ರಿಯಾಕ್ಟ್‌ ಮಾಡ್ತೀರಿ? ಇದರಿಂದ ಮಕ್ಕಳು ಕಲಿಯೋದೇನು?

ಅಪ್ಪ ಇನ್ನೇನು ಆಫೀಸಿಗೆ ಹೊರಡೋಕೆ ಕಾರ್‌ ಕೀ ತೆಗೆದುಕೊಳ್ತಿದ್ದಾರೆ ಅಂದಾಗ ಹತ್ತು ವರ್ಷದ ಶ್ಯಾಮ ನಿನ್ನೆಯಷ್ಟೇ ತಂದಿದ್ದ ಕ್ಯಾಮರಾವನ್ನು ಬೀಳಿಸಿಬಿಟ್ಟ. ಬೇಕಂತ ಅಲ್ಲವಾದ್ರೂ ಅಜಾಗರೂಕತೆಯಿಂದ! ಎಷ್ಟು ಬಾರಿ ಓಡಾಡುವಾಗಲೂ ʼನಿಧಾನ ಮಾಡು. ಮನೆಯ ವಸ್ತುಗಳನ್ನು ಹಾಳು ಮಾಡುತ್ತೀʼ ಎಂದು ಕೂಗಿ ಕೂಗಿ ಹೇಳಿದ್ರೂ ಕ್ಯಾರೆ ಎನ್ನದ ಶ್ಯಾಮನಿಗೆ ನೆಲದ ಮೇಲೆ ಹತ್ತಾರು ಚೂರಾಗಿ ಬಿದ್ದಿದ್ದ ಕ್ಯಾಮರಾ ನೋಡಿ ನಡುಕ ಹುಟ್ಟಿತ್ತು. ಇಂದಿಗೆ ನನ್ನ ಕಥೆ ಮುಗಿಯಿತು ಎಂದು ಗಳಗಳನೆ ಅಳತೊಡಗಿದ. ಕ್ಯಾಮರಾ ಬಿದ್ದ ಸದ್ದಿಗೆ ವಾಪಾಸ್‌ ಬಂದ ಅಪ್ಪನ ಕಣ್ಣು ಕೆಂಡದಂತೆ ಕಾಣಿಸುತ್ತಿದ್ದವು. ಅದೇ ಟೈಮ್‌ಗೆ ಅಪ್ಪನ ಫೋನ್‌ ರಿಂಗ್‌ ಆಯ್ತು. ಅಪ್ಪ ʼಸಂಜೆ ನಿಂಗಿದೆ ಹಬ್ಬʼ ಎಂದು ದೊಡ್ಡ ದನಿಯಲ್ಲಿ ಹೇಳಿ ಹೊರಟು ಹೋದ್ರು!

ಶ್ಯಾಮ ಸಂಜೆಯವರೆಗೂ ಬದುಕಿರುತ್ತೇನಷ್ಟೇ ಎಂದುಕೊಳ್ಳುತ್ತಾ ಭಯದಲ್ಲೇ ಅಮ್ಮನ ಮಡಿಲು ಸೇರಲು ಯತ್ನಿಸಿದ. ಅಮ್ಮನಿಗೂ ಕೋಪ ನೆತ್ತಿಗೆ ಹತ್ತಿತ್ತು. ಸಿಟ್ಟು ತಡೆಯಲಾಗದೇ ಒಂದೆರಡು ಪೆಟ್ಟು ಕೊಟ್ಟು ವಾಪಾಸ್‌ ಅಡುಗೆ ಮನೆಗೆ ಹೋಗಿಬಿಟ್ಟಳು. ಇದಾದ ಅರ್ಧಗಂಟೆಯಲ್ಲಿ ಶ್ಯಾಮ ಮನೆಯಲ್ಲೇ ಇರಲಿಲ್ಲ. ಅಕ್ಕಪಕ್ಕದ ಮನೆ, ಸ್ನೇಹಿತರ ಮನೆ ಎಲ್ಲಿಯೂ ಶ್ಯಾಮ ಕಾಣಿಸಲೇ ಇಲ್ಲ. ಕಂಗಾಲಾದ ತಾಯಿ ತಂದೆಗೆ ಫೋನ್‌ ಮಾಡಿ ಮಗ ಕಾಣಿಸುತ್ತಿಲ್ಲ ಎಂದು ಹೇಳಿದಳು. ಇಡೀ ದಿನ ಅಳುತ್ತಾ, ಮಗ ಏನಾದರೂ ಮಾಡಿಕೊಂಡನೇ? ಯಾವುದಾದರೂ ವಾಹನ ಗುದ್ದೀತೇ? ಯಾರಾದರೂ ಕರೆದುಕೊಂಡು ಹೋಗಿಬಿಟ್ರಾ? ಎನ್ನುವ ಕೆಟ್ಟ ಆಲೋಚನೆಗಳಿಂದ ನಿಮಿಷವೂ ಕೂತಲ್ಲಿ ಕೂರಲಾಗದೇ ನಿಂತಲ್ಲಿ ನಿಲ್ಲಲಾರದೇ ಮಗನನ್ನು ನೋಡಿದರೆ ಸಾಕು ಎಂದುಕೊಳ್ಳುವಂತಾಯ್ತು! ಹತ್ತಾರು ಗಂಟೆಯ ನಂತರ ಸ್ನೇಹಿತನ ಮನೆಯೊಂದರಲ್ಲಿ ಶ್ಯಾಮ ಸಿಕ್ಕಿದ. ಅಪ್ಪ ಅಮ್ಮ ಕಣ್ಣೀರಿಡುತ್ತಾ ಮಗನನ್ನು ತಬ್ಬಿ ಸಾರಿ ಕೇಳಿದರು!

ಇದು ಹ್ಯಾಪಿ ಎಂಡಿಂಗ್‌ ಸನ್ನಿವೇಶ. ಆದರೆ ಸುಮ್ನೆ ಇಮ್ಯಾಜಿನ್‌ ಮಾಡಿ. ನಿಜವಾಗಿಯೂ ನಿಮ್ಮ ಮಗು ಕಾಣೆಯಾದಗಿದ್ರೆ? ಅನುಭವಿಸಬಾರದ ಕಷ್ಟಗಳನ್ನು ಅನುಭವಿಸಿದ್ರೆ? ಮತ್ತೆ ಮಗನನ್ನು ನೋಡಲು ಆಗದೇ ಹೋಗಿದ್ರೆ? ಮಕ್ಕಳು ಮಾಡುವ ತಪ್ಪಿಗೆ ಹೇಗೆ ರಿಯಾಕ್ಟ್‌ ಮಾಡ್ತೀರಿ ಅನ್ನೋದು ತುಂಬಾನೇ ಮುಖ್ಯ. ಮಕ್ಕಳು ತಪ್ಪು ಮಾಡುತ್ತಾರೆ. ಬೇಡ ಎಂದಿದ್ದನ್ನೇ ಮಾಡುತ್ತಾರೆ. ಎಷ್ಟು ಬಾರಿ ಬುದ್ಧಿ ಹೇಳಿದರೂ ಮತ್ತದೇ ತಲೆಹರಟೆಯನ್ನು ಇಷ್ಟಪಡ್ತಾರೆ. ಹಾಗಂತ ಮಕ್ಕಳನ್ನು ಹೊಡೆದು ಹಾಕುತ್ತೀರಾ? ಹಾಗೆ ಹೊಡೆದು ಬೈದು ಮಾಡಿದರೆ ಇನ್ನೆಂದೂ ಮಕ್ಕಳು ತಪ್ಪು ಮಾಡೋದಿಲ್ವಾ?

ತಪ್ಪು ಮಾಡ್ತಾರೆ ಬಟ್‌ ನಿಮಗೆ ಹೇಳೋದನ್ನು ನಿಲ್ಲಿಸ್ತಾರೆ, ನಿಮ್ಮಿಂದ ಮುಚ್ಚಿಡೋದನ್ನು ಕಲೀತಾರೆ, ಒಂದು ಸುಳ್ಳನ್ನು ಮುಚ್ಚಲು ಸಾವಿರ ಸುಳ್ಳು ಹೇಳೋಕೆ ಆರಂಭಿಸ್ತಾರೆ.

ಮಕ್ಕಳು ತಪ್ಪು ಮಾಡಿದಾಗ, ವಸ್ತುಗಳನ್ನು ಹಾಳು ಮಾಡಿದಾಗ ಏನು ಮಾಡೋದು?

ವಸ್ತು ಎಷ್ಟೇ ದುಬಾರಿಯಾಗಿರಲಿ. ನಿಮ್ಮ ಮಕ್ಕಳಷ್ಟು ಅಮೂಲ್ಯ ಅಲ್ಲ ಅನ್ನೋದು ಮನಸ್ಸಿನಲ್ಲಿ ಇರಲಿ. ದುಬಾರಿ ಹಾಗೂ ಸುಲಭವಾಗಿ ಒಡೆದುಹೋಗುವ ವಸ್ತುಗಳನ್ನು ಮಕ್ಕಳ ಕೈಗೆ ಎಟುಕದ ಜಾಗದಲ್ಲಿ ಇಡೋದನ್ನು ರೂಢಿ ಮಾಡಿ.

ಮಕ್ಕಳು ಏನಾದ್ರೂ ಬೀಳಿಸಿ ಒಡೆದು ಹಾಕಿದ್ರೆ ಕೋಪ ಬರೋದು ಮಾಮೂಲಿ. ಬಟ್‌ ಒಂದು ಕ್ಷಣ ಪಾಸ್‌ ಮಾಡಿ. ಹತ್ತರವರೆಗೂ ಎಣಿಸಿ. ದೀರ್ಘ ಉಸಿರಾಟದ ನಂತರ ಏನೂ ಮಾಡದೇ ಬಿದ್ದಿದ್ದನ್ನು ಕ್ಲೀನ್‌ ಮಾಡಿ.

ಮಕ್ಕಳಿಗೆ ಏನಾದ್ರೂ ಹರ್ಟ್‌ ಆಗಿದ್ಯಾ? ಗಾಯ ಆಗಿದ್ಯಾ ಅನ್ನೋದನ್ನು ಚೆಕ್‌ ಮಾಡಿ. ಶಾರ್ಪ್‌ ವಸ್ತು ಕೆಳಕ್ಕೆ ಬಿದ್ದಿದ್ದರೆ ಮಕ್ಕಳನ್ನು ನಿಧಾನಕ್ಕೆ ಹಿಂದೆ ಹೋಗಲು ಹೇಳಿ. ಕಾಮ್‌ ಆದ ವಾಯ್ಸ್‌ನಿಂದ ಮಾತನಾಡಿ. ಅಯ್ಯೋ ಮಿಸ್‌ ಆಗಿ ಬಿದ್ದೋಯ್ತಾ? ಅಂತ ಜೋರಾಗಿ ಹೇಳಿ. ಇದು ನಿಮ್ಮ ನರ್ವಸ್‌ ಸಿಸ್ಟಮ್‌ಗೆ ಇದೊಂದು ಆಕ್ಸಿಡೆಂಟ್‌ ಎಂದು ಹೇಳಿ ಶಾಂತಗೊಳಿಸುತ್ತದೆ.

ಶಾರ್ಪ್‌ ಆದ ಪದಾರ್ಥ ಅಲ್ಲ ಎಂದಾದರೆ ಬೀಳಿಸಿದ ಮಗು ಹಾಗೂ ಬೀಳಿಸದ ಮಗುವನ್ನು ಕರೆದು ಕ್ಲೀನ್‌ ಮಾಡುವಂತೆ ಹೇಳಿ. ನೀವು ಮಕ್ಕಳ ಜೊತೆ ಕ್ಲೀನ್‌ ಮಾಡಿ. ಇದು ತಪ್ಪಿಗೆ ರೆಸ್ಪಾನ್ಸಿಬಿಲಿಟಿ ತೆಗೆದುಕೊಳ್ಳುವುದು ಹಾಗೂ ಕೂಡಿ ಕೆಲಸ ಮಾಡುವುದನ್ನು ಕಲಿಸುತ್ತದೆ. ಇನ್ನೊಂದು ಬಾರಿ ಯಾರಾದರೂ ಕಷ್ಟದಲ್ಲಿದ್ದರೆ ಸಹಾಯ ಮಾಡಲು ಅವರೇ ಮುಂದಾಗುತ್ತಾರೆ.

ಸ್ವಲ್ಪ ಸಮಯದ ನಂತರ ಮನೆಯ ವಾತಾವರಣ ಕೂಲ್‌ ಆದಾಗ, ಮಗುವನ್ನು ಕೂರಿಸಿಕೊಂಡು ಬುದ್ಧಿ ಹೇಳಿ. ಮಗು ಮಾಡಿದ್ದು ತಪ್ಪು, ಮುಂದೆಂದೂ ಅಜಾಗರೂಕತೆಯಿಂದ ಹಣ ವ್ಯರ್ಥ ಮಾಡಬಾರದೆಂದು ಹೇಳಿಕೊಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !