ಇಂದು ರಕ್ಷಾ ಬಂಧನ ಹಬ್ಬವನ್ನು ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಣ್ಣ ಅಥವಾ ತಮ್ಮನಿಗೆ ಪ್ರೀತಿಯಿಂದ ತಂಗಿ ರಾಖಿ ಕಟ್ಟಿ ಅವರಿಂದ ಉಡುಗೊರೆ ಪಡೆಯುತ್ತಾರೆ.
ಮಹೂರ್ತದ ಸಮಯದಲ್ಲಿ ಅಣ್ಣನನ್ನು ಕುಳ್ಳಿರಿಸಿ ಹಣೆಗೆ ಕುಂಕುಮ ಇಟ್ಟು, ಬಾಯಿಗೆ ಸಿಹಿ ನೀಡಿ ಅಣ್ಣನ ಆಶೀರ್ವಾದ ಪಡೆದ ತಂದೆ ರಕ್ಷೆಯನ್ನು ಕಟ್ಟುತ್ತಾಳೆ.
ಅಂತೆಯೇ ಅಣ್ಣನೂ ಜೀವನಾದ್ಯಂತ ಆಕೆಯನ್ನು ರಕ್ಷಿಸುವ ಪಣ ತೊಟ್ಟು, ಪ್ರೀತಿಯ ಉಡುಗೊರೆ ನೀಡುತ್ತಾರೆ.
ರಾಖಿ ಕಟ್ಟುವ ಹಿಂದಿದೆ ಪುರಾಣದ ಕಥೆ..
ಪುರಾಣಗಳ ಪ್ರಕಾರ ಶ್ರೀಕೃಷ್ಣನ ಸುದರ್ಶನ ಚಕ್ರಕ್ಕೆ ಬೆರಳು ತಗುಲಿ ಕೈಯಿಂದ ರಕ್ತ ಸೋರುತ್ತಿರುತ್ತದೆ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ದ್ರೌಪದಿ ಸ್ವಲ್ಪವೂ ಹಿಂಜರಿಯದೆ ತನ್ನ ಸೀರೆಯ ಸೆರಗಿನ ಅಂಚನ್ನು ಕತ್ತರಿಸಿ ಕೈ ಬೆರಳಿಗೆ ಗಟ್ಟಿಯಾಗಿ ಕಟ್ಟಿ ರಕ್ತವನ್ನು ನಿಲ್ಲಿಸುತ್ತಾಳೆ.
ಆ ಕ್ಷಣದಿಂದ ಕೃಷ್ಣ ದ್ರೌಪದಿಯನ್ನು ತನ್ನ ಸಹೋದರಿಯಾಗಿ ಸ್ವೀಕರಿಸುತ್ತಾನೆ. ಕೌರವರು ದ್ರೌಪದಿಯ ಸೀರೆಯನ್ನು ಎಳೆಯುವ ಸಂದರ್ಭದಲ್ಲಿ ನನ್ನನ್ನು ರಕ್ಷಿಸು ಎಂದು ದ್ರೌಪದಿ ಕೃಷ್ಣನನ್ನು ಬೇಡುತ್ತಾಳೆ. ಕೃಷ್ಣ ದ್ರೌಪದಿಗೆ ಮುಗಿಯದಷ್ಟು ಬಟ್ಟೆ ನೀಡಿ ಆಕೆಯನ್ನು ರಕ್ಷಿಸುತ್ತಾನೆ.
ಸೀರೆಯನ್ನು ಅಣ್ಣನ ಕೈಗೆ ಕಟ್ಟಿದ ದ್ರೌಪದಿಯಿಂದ ರಕ್ಷಾಬಂಧನ ಹುಟ್ಟಿದೆ ಎನ್ನಲಾಗಿದೆ.