ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ವಿಶಾಲ್ ಗೆಯಾವುದೋ ಗಂಭೀರ ಕಾಯಿಲೆ ಬಂದಿದೆ ಎಂಬ ವದಂತಿಗಳು ಹರಡಿತು. ಜೊತೆಗೆ ವಿಶಾಲ್‌ಗೆ ದೃಷ್ಟಿಯಲ್ಲಿಯೂ ಸಮಸ್ಯೆ ಇದೆ ಎಂದು ವರದಿಯಾಗಿದೆ. ಆದರೆ ವಿಶಾಲ್ ಅವರ ಮ್ಯಾನೇಜರ್ ಹರಿಕೃಷ್ಣನ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ತೀವ್ರ ವೈರಲ್ ಜ್ವರದಿಂದಾಗಿ ವಿಶಾಲ್ ಕೆಲವು ದಿನಗಳಿಂದ ಹಾಸಿಗೆಯಲ್ಲಿದ್ದಾರೆ. ಅಲ್ಲಿಂದ ಅವರ ಒತ್ತಾಯದ ಮೇರೆಗೆ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಮ್ಯಾನೇಜರ್ ಹೇಳಿದ್ದಾರೆ.
ಅಪೋಲೋ ಆಸ್ಪತ್ರೆಯ ವೈದ್ಯ ವಿ.ಎಸ್. ರಾಜ್‌ಕುಮಾರ್ ವಿಶಾಲ್‌ಗೆ ವಿಶ್ರಾಂತಿ ಪಡೆಯಲು ಸೂಚಿಸಿದ ಟಿಪ್ಪಣಿಯನ್ನು ಸಹ ಮ್ಯಾನೇಜರ್ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ವಿಶಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿಯನ್ನು ಮ್ಯಾನೇಜರ್ ನಿರಾಕರಿಸಿದ್ದಾರೆ. ವಿಶಾಲ್ ಮನೆಯಲ್ಲಿದ್ದಾರೆ ಮತ್ತು ಶೀಘ್ರದಲ್ಲೇ ಚೇತರಿಸಿಕೊಂಡು ಸಿನಿಮಾಕ್ಕೆ ಮರಳುತ್ತಾರೆ ಎಂದು ಮ್ಯಾನೇಜರ್ ತಿಳಿಸಿದ್ದಾರೆ.
ಈ ಸಂಕ್ರಾಂತಿಗೆ 12 ವರ್ಷಗಳ ಕಾಲ ಬಾಕ್ಸ್‌ನಲ್ಲಿದ್ದ ವಿಶಾಲ್ ಅವರ ಮಧ ಗಜ ರಾಜ ಚಿತ್ರ ಬಿಡುಗಡೆಯಾಗಲಿದೆ. ಆದರೆ ಈ ಚಿತ್ರದ ಲಾಂಚ್‌ಗೆ ಬಂದ ವಿಶಾಲ್ ಅವರನ್ನು ನೋಡಿ ಚಿತ್ರರಂಗ ದಂಗಾಯಿತು. ತೀರಾ ದುರ್ಬಲರಾಗಿ ಕಾಣಿಸಿಕೊಂಡ ವಿಶಾಲ್ ಅವರ ಕೈಗಳು ನಡುಗುತ್ತಿದ್ದವು. ನಡುಗುತ್ತಿದ್ದ ವಿಶಾಲ್ ಅವರನ್ನು ಸುರಕ್ಷಿತವಾಗಿ ಕುರ್ಚಿಯಲ್ಲಿ ಕೂರಿಸಿದ್ದು, ನಟ ವಿಜಯ್ ಆಂಟನಿ ಈ ಚಿತ್ರದ ಸಂಗೀತ ನಿರ್ದೇಶಕರೂ ಆಗಿದ್ದಾರೆ.
ನಟ ವಿಶಾಲ್ ಅವರ ಆರೋಗ್ಯದ ಬಗ್ಗೆ ವದಂತಿಗಳು ಹರಡಿದ ನಂತರ, ಅವರ ಮ್ಯಾನೇಜರ್ ವೈದ್ಯರ ಚಿಕಿತ್ಸಾ ಟಿಪ್ಪಣಿ ಬಿಡುಗಡೆ ಮಾಡಿ, ಮಾಧ್ಯಮಗಳಿಗೆ ಮತ್ತು ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.