November 3, 2026
Tuesday, November 3, 2026
spot_img

ಕರೆಯದೇ ಇರುವ ಮದುವೆಗೆ ಹೇಗೆ ಹೋಗೋಕೆ ಸಾಧ್ಯ? ಅರ್ಜುನ್‌ ಸರ್ಜಾ ಮಗಳ ಮದುವೆ ಬಗ್ಗೆ ಮಾತನಾಡಿದ ಮೇಘನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಕ್ಷಿಣ ಭಾರತದ ಖ್ಯಾತ ನಟ ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಕುಟುಂಬದ ಮದುವೆಗೆ ನನ್ನನ್ನು ಆಹ್ವಾನಿಸಿಲ್ಲ ಎಂದು ನಟಿ ಮೇಘನಾ ರಾಜ್‌ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅರ್ಜುನ್ ಅವರು ವಿದೇಶಿ ಉದ್ಯಮಿ ಇಸಾಯ್ ಅವರೊಂದಿಗೆ ವಿದೇಶದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ತೀರ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಈ ಅದ್ದೂರಿ ಮದುವೆ ನೆರವೇರಿತ್ತು.ಈ ಅಪರೂಪದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಧರ್ಮಪತ್ನಿ ಪ್ರೇರಣಾ ವಿದೇಶಕ್ಕೆ ತೆರಳಿದ್ದರು. ಮದುವೆಯ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಆದರೆ, ಈ ಶುಭ ಕಾರ್ಯಕ್ರಮದಲ್ಲಿ ನಟಿ ಮೇಘನಾ ರಾಜ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ.

ಈ ಬಗ್ಗೆ ಮೇಘನಾ ರಾಜ್‌ ಮಾತನಾಡಿ, ನನಗೆ ಮದುವೆಗೆ ಬನ್ನಿ ಎಂದು ಯಾರೂ ಕರೆದಿಲ್ಲ. ಧ್ರುವ ಹಾಗೂ ಪ್ರೇರಣಾಗೆ ಆಹ್ವಾನ ನೀಡಲಾಗಿತ್ತು. ಅದಕ್ಕೆ ಅವರು ಮಾತ್ರ ಹೋಗಿದ್ದರು ಎಂದು ಹೇಳಿದ್ದಾರೆ. ನನಗೆ ಯಾಕೆ ಆಹ್ವಾನ ನೀಡಲಿಲ್ಲ ಎನ್ನುವ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ. ಅವರು ಸಿಕ್ಕಾಗ ಅವರನ್ನು ಪ್ರಶ್ನಿಸಿ ಎಂದು ಮೇಘನಾ ಖಡಕ್‌ ಆಗಿ ಹೇಳಿದ್ದಾರೆ.

Must Read