ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಇಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದಾರೆ. ಈ ದಿನ ಕೃಷ್ಣನ ಜನ್ಮದಿನವನ್ನಾಗಿ ಉಡುಪಿ ಕೃಷ್ಣ ಮಠದಲ್ಲಿ ಅತೀ ಅದ್ಧೂರಿ ಅಷ್ಟಮಿ ಆಚರಿಸುತ್ತಾರೆ.
ಇನ್ನು ತಾಯಂದಿರು ತಮ್ಮ ಪುಟಾಣಿ ಕಂದಮ್ಮಗಳಿಗೆ ರಾಧೆ ಹಾಗೂ ಕೃಷ್ಣನಂತೆ ಅಲಂಕಾರ ಮಾಡಿ ನೋಡುವುದು ಹಬ್ಬದ ಮತ್ತೊಂದು ವಿಶೇಷ.
ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಲ್ಲಿ ಕೃಷ್ಣನು ಹುಟ್ಟಿದ್ದಾನೆ ಎನ್ನಲಾಗಿದೆ. ಅಷ್ಟಮಿಯ ಮಧ್ಯರಾತ್ರಿ ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತು, ಮಥುರಾದಲ್ಲಿ ಕೃಷ್ಣ ಹುಟ್ಟಿದ್ದು, ತಕ್ಷಣವೇ ತಂದೆ ವಸುದೇವ ಕೃಷ್ಣನನ್ನು ಸೋದರಮಾವ ಕಂಸನಿಂದ ರಕ್ಷಿಸಲು ಗೋಕುಲಕ್ಕೆ ಕರೆದೊಯ್ಯುತ್ತಾನೆ. ನಂದಮಹಾರಾಜನ ಮನೆಯಲ್ಲಿ ಶ್ರೀಕೃಷ್ಣನನ್ನು ಬಿಟ್ಟು ಬರುತ್ತಾನೆ. ಕೃಷ್ಣನಿಗೆ ಇಬ್ಬರು ತಾಯಿಯಾಗುತ್ತದೆ. ದೇವಕಿ ಜನ್ಮ ನೀಡಿದರೆ, ಯಶೋದೆ ಸಾಕಿ ಬೆಳೆಸಿದ ತಾಯಿಯಾಗಿದ್ದಾರೆ.
ಆಚರಣೆ ಹೇಗೆ?
ಕೃಷ್ಣನಿಗಾಗಿ ಬೃಂದಾವನವನ್ನು ನಿರ್ಮಿಸಿ, ಕೃಷ್ಣನ ಪ್ರತಿಮೆಗೆ ಹಾಲು ಹಾಗೂ ನೀರಿನಲ್ಲಿ ತೊಳೆಯಬೇಕು. ನಂತರ ಹೊಸ ಬಟ್ಟೆ ತೊಡಿಸಿ ಪೂಜಿಸಬೇಕು. ಈ ದಿನ ಉಪವಾಸ ಮಾಡುವುದು ಶ್ರೇಷ್ಠ. ಇಂದು ಮಧ್ಯರಾತ್ರಿ ಜನ್ಮದಿನ ಆಚರಿಸಿ ಉಪವಾಸ ಮುರಿಯಬಹುದು.