ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ಬ್ಯೂಟಿ ಸಮಂತಾ (Samantha) ಅವರು ಮೈಯೋಸಿಟಿಸ್ (Myosities) ಎಂಬ ಕಾಯಿಲೆಯ ಜೊತೆ ಹೋರಾಡುತ್ತಿದ್ದು, ಆದ್ರೂಶೂಟಿಂಗ್ ನಲ್ಲೂ ಭಾಗವಹಿಸುತ್ತಾರೆ.
ಇದೀಗ ತಮ್ಮ ಹೆಲ್ತ್ ಬಗ್ಗೆ ನಟಿ ಅಪ್‌ಡೇಟ್ ನೀಡಿದ್ದಾರೆ. ಈ ಕುರಿತ ಪೋಸ್ಟ್‌ವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
`ಯಶೋದ’ (Yashoda) ಸಿನಿಮಾ ರಿಲೀಸ್ ಸಮಯದಲ್ಲಿ ಮೈಯೋಸಿಟಿಸ್ ಕಾಯಿಲೆಗೆ ನಟಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದರು. ಪ್ರತಿದಿನವೂ ಈ ಅಪರೂಪದ ಕಾಯಿಲೆಯ ಜೊತೆ ಸ್ಯಾಮ್ ಹೋರಾಡುತ್ತಿದ್ದಾರೆ.
IVIG ಥೆರಪಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. IVIG ಎಂದರೆ ಥೆರಪಿಯಾಗಿದೆ. ದುರ್ಬಲಗೊಂಡಿರುವ ವ್ಯಕ್ತಿ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ಒಂದು ಚಿಕಿತ್ಸೆಯಾಗಿದೆ. ಸದ್ಯ ಸಮಂತಾ ಕೂಡ ಇದೇ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಈ ಚಿಕಿತ್ಸೆಯ ಪ್ರಕ್ರಿಯೆ ಸುಮಾರು 2 ರಿಂದ 4 ಗಂಟೆಗಳವರೆಗೆ ತೆಗೆದುಕೊಳ್ಳಬಹುದು ಮತ್ತು ಚಿಕಿತ್ಸೆಯ ಸಮಯದಲ್ಲಿ, ತಯಾರಾದ ಇಮ್ಯುನೊಗ್ಲಾಬ್ಯುಲಿನ್ ಅನ್ನು ರಕ್ತನಾಳಗಳಲ್ಲಿ ತುಂಬಿಸಲಾಗುತ್ತದೆ. ಸಮಂತಾ ಫೋಟೋವನ್ನು ಶೇರ್ ಮಾಡಿದ್ದಾರೆ. ಡ್ರಿಪ್ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ಆದರೆ ಅವರ ಮುಖ ಕಾಣುವುದಿಲ್ಲ. ಸಮಂತಾ ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.