ಹೊಸದಿಗಂತ ಡಿಜಿಟಲ್ ಡೆಸ್ಕ್:
ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ (Saalu Marada Thimmakka Health ಆರೋಗ್ಯದ ಕುರಿತು ಅವರ ಮಗ ಉಮೇಶ್ ಮಾಹಿತಿ ನೀಡಿದ್ದಾರೆ.
ಭಾನುವಾರ ಸಂಜೆ ಮನೆಯಲ್ಲಿ ಆಯತಪ್ಪಿ ಬಿದ್ದರು. ಕೂಡಲೇ ಅವರನ್ನ ಆಸ್ಪತ್ರೆಗೆ ಸೇರಿದೆವು. ಈಗ ಐಸಿಯುವಿನಲ್ಲಿ ಚಿಕಿತ್ಸೆ ನೀಡ್ತಿದ್ದಾರೆ. ಸೊಂಟದ ಮೂಳೆಗೆ ಪೆಟ್ಟಾಗಿದೆ. ಈ ಹಿಂದೆಯೂ ಹಿಪ್‍ಜಾಯಿಂಟ್‍ಗೆ ಪೆಟ್ಟಾಗಿತ್ತು ಎಂದರು.
ಸದ್ಯ ವೈದ್ಯರ ನಿಗಾದಲ್ಲಿದ್ದಾರೆ. ಡಾ. ಸಂದೀಪ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 112 ವರ್ಷವಾಗಿರೋದ್ರಿಂದ ಹೆಚ್ಚಾಗಿ ನೋವಿದೆ. ನಮಗೆ ಸಣ್ಣ ಪುಟ್ಟ ಗಾಯವಾದ್ರೆ ತಡಿಯೋಕೆ ಆಗೋಲ್ಲ. ಅವರಿಗೆ ವಯಸ್ಸು ಅಷ್ಟಾಗಿದೆ, ನೋವು ಜಾಸ್ತಿನೇ ಆಗಿದೆ. ಸೋಂಟದ ನೋವು ಬಿಟ್ರೇ ಬೇರೆ ಏನೂ ಸಮಸ್ಯೆ ಆಗಿಲ್ಲ ಎಂದು ಅವರು ಹೇಳಿದರು.