ಎಲ್ಲರಿಗೂ ತಮ್ಮ ಜೀವನದಲ್ಲಿ ಏನೋ ಸರಿಯಿಲ್ಲ ಅನ್ನೋ ಭಾವನೆ ಇದ್ದದ್ದೆ, ನಮಗಿಂತ ನೋಡೋಕೆ ಚೆನ್ನಾಗಿರೋ ಅಥವಾ ಚೆನ್ನಾಗಿ ಜೀವನ ಮಾಡ್ತಿರೋರನ್ನು ನೋಡಿ ಹೊಟ್ಟೆ ಉರಿದುಕೊಳ್ಳೋದು ಅಥವಾ ಅವರಂತೆ ನಾವಾಗ್ಬೇಕು ಅಂತ ಹಂಬಲಿಸೋದು! ಆದರೆ ಇಷ್ಟೇನಾ ಜೀವನ? ನಮ್ಮನ್ನು ನಂಬಿ ನಿಮ್ಮ ಜೀವನ ತುಂಬಾನೇ ಚೆನ್ನಾಗಿದೆ, ನಿಮ್ಮ ರೀತಿ ಜೀವನ ಮಾಡ್ಬೇಕು ಅಂತ ಸಾಕಷ್ಟು ಮಂದಿ ಕನಸು ಕಂಡಿರ್ತಾರೆ.. ನಿಮ್ಮ ಜೀವನ ಸೂಪರ್ ಆಗಿದೆ ಅಂತ ಹೇಳ್ಕೊಳ್ಳೋಕೆ ಈ ಹತ್ತು ಅಂಶಗಳಿದ್ರೆ ಸಾಕು..
- ನಿಮ್ಮನ್ನು ಪ್ರೀತಿಸೋ ಜನ ಸುತ್ತಮುತ್ತ ಇದ್ದಾರೆ
- ಇವತ್ತು ತಿಂಡಿ, ಊಟ, ಸ್ನ್ಯಾಕ್ಸ್, ಡಿನ್ನರ್ ಮಾಡಿದ್ದೀರಿ
- ತಲೆಯ ಮೇಲೆ ಸೂರಿದೆ
- ಜೀವನದಲ್ಲಿ ಹೀಗೆ ಆಗಬೇಕು ಅನ್ನೋ ಗುರಿಯಿದೆ
- ಕುಡಿಯೋಕೆ ಶುದ್ಧ ನೀರು ಸಿಗ್ತಾ ಇದೆ
- ಕುಟುಂಬ ಇದೆ, ತಂದೆ ತಾಯಿ, ಗಂಡ-ಹೆಂಡತಿ ಮಕ್ಕಳು, ಸ್ನೇಹಿತರು ಇದ್ದಾರೆ
- ಎದ್ದು ವ್ಯಾಯಾಮ ಮಾಡುವಷ್ಟು ಆರೋಗ್ಯ ಇದೆ
- ಮಾನಸಿಕವಾಗಿ, ದೈಹಿಕವಾಗಿ ದೃಢವಾಗಿದ್ದೀರಿ
- ಕೆಲಸ ಇದೆ, ಸಂಬಳ ಇದೆ.
- ಇಂದು ಬೆಳಗ್ಗೆ ಎದ್ದಿರೋದಕ್ಕೆ!