ಇಟಲಿಯಲ್ಲಿ ಭೀಕರ ಪ್ರವಾಹ: 6 ಮಂದಿ ಬಲಿ, ಹಲವರು ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಧ್ಯ ಇಟಲಿಯ ಟಸ್ಕನಿ ಪ್ರದೇಶದಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಸಿಯಾರನ್ ಚಂಡಮಾರುತಕ್ಕೆ ಬಹುತೇಕ ಪಟ್ಟಣಗಳು ಜಲಾವೃತಗೊಂಡಿವೆ. ಫ್ಲಾರೆನ್ಸ್ ನ ವಾಯುವ್ಯಕ್ಕೆ 15 ಕಿಲೋಮೀಟರ್ (9 ಮೈಲಿ) ದೂರದಲ್ಲಿರುವ ಕ್ಯಾಂಪಿ ಬಿಸೆಂಜಿಯೊ ಪಟ್ಟಣದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಪ್ರವಾಹದಲ್ಲಿ 6 ಜನ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಸದ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ನಾಗರಿಕ ರಕ್ಷಣೆಯ ಪ್ರಾದೇಶಿಕ ಕೌನ್ಸಿಲರ್ ಮೋನಿಯಾ ಮೊನ್ನಿ ಹೇಳಿದ್ದಾರೆ.

ಪ್ರವಾಹದ ಭೀಕರತೆಯು ಇನ್ನಷ್ಟು ತೀವ್ರಗೊಳ್ಳುವ ಹಿನ್ನೆಲೆಯಲ್ಲಿ ಕ್ಯಾಂಪಿ ಬಿಸೆಂಜಿಯೊದಲ್ಲಿ ಸುಮಾರು 190 ಜನರು ತಮ್ಮ ಮನೆಗಳನ್ನು ಖಾಲಿ ಮಾಡಲು ಅಲ್ಲಿನ ಸರ್ಕಾರವು ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!