TECH | ರೀಚಾರ್ಜ್‌ ಮಾಡದೇ ಸಿಮ್‌ನ್ನು ಎಷ್ಟು ದಿನ ಬಳಕೆ ಮಾಡಬಹುದು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೀಚಾರ್ಜ್‌ ಮಾಡಿಸದೇ ಹೋದರೆ ಸಿಮ್‌ ಎಷ್ಟು ದಿನಗಳವರೆಗೆ ಕೆಲಸ ಮಾಡುತ್ತದೆ? ಈ ಬಗ್ಗೆ ಮಾಹಿತಿ ಇಲ್ಲಿದೆ..

ಒಂದಕ್ಕಿಂತ ಹೆಚ್ಚು ಮೊಬೈಲ್​ ಸಿಮ್​ಗಳನ್ನು ಹೊಂದಿರುವ ಗ್ರಾಹಕರಿಗೆ ಇದು ಮಹತ್ವದ ಮಾಹಿತಿ. ತಾವು ಎರಡನೇ ಸಿಮ್​ ಅನ್ನು ರೀಚಾರ್ಜ್​ ಮಾಡದೇ ಇದ್ದರೆ ಅದು ನಿಗದಿತ 90 ದಿನಗಳವರೆಗೂ ನಿಷ್ಕ್ರಿಯವಾಗುವುದಿಲ್ಲ. ಜೊತೆಗೆ ಕೇವಲ ವಾಯ್ಸ್​ ಕರೆಗಳಿಗೆ ಮಾತ್ರ ಪ್ಲಾನ್​ಗಳನ್ನು ರೂಪಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ನೀಡಿದೆ.

ಸಿಮ್​ ಕಾರ್ಡ್​ಗಳ ನಿಷ್ಕ್ರಿಯತೆ ಮತ್ತು ವಾಯ್ಸ್​ ಕರೆಗಳ ಯೋಜನೆಗಳಿಗೆ ಸಂಬಂಧಿಸಿದಂತೆ ಟ್ರಾಯ್​ ಮಹತ್ವದ ನಿರ್ಧಾರ ಕೈಗೊಂಡಿದೆ. ಇದು ಇಂಟರ್ನೆಟ್​ ಡೇಟಾ ಅಗತ್ಯವಿಲ್ಲದ ಬಳಕೆದಾರರಿಗೆ ಹೆಚ್ಚಿನ ಅನುಕೂಲ ನೀಡುತ್ತದೆ.

ಟೆಲಿಕಾಂ ಗ್ರಾಹಕ ಸಂರಕ್ಷಣಾ ನಿಯಮಗಳ 6ನೇ ತಿದ್ದುಪಡಿಯ ಪ್ರಕಾರ, ಯಾವುದೇ ಟೆಲಿಕಾಂ ಕಂಪನಿಯ ಬಳಕೆದಾರರು ತಾವು ಬಳಸುತ್ತಿರುವ ಸಿಮ್​ಗಳನ್ನು ರೀಚಾರ್ಜ್​ ಮಾಡದೇ ಹೋದಲ್ಲಿ ಗರಿಷ್ಠ 90 ದಿನಗಳವರೆಗೆ ಬಳಕೆ ಮಾಡಬಹುದಾಗಿದೆ. ಬಳಿಕ ರೀಚಾರ್ಜ್​ ಮಾಡಲು 15 ದಿನ ಹೆಚ್ಚುವರಿ ಸಮಯ ನೀಡಲಾಗುತ್ತದೆ. ಇದಾದ ಬಳಿಕವೂ ಬಳಕೆದಾರರು ರೀಚಾರ್ಜ್​ ಮಾಡದೇ ಹೋದಲ್ಲಿ ಸಿಮ್​ ಅನ್ನು ಕಂಪನಿಗಳು ನಿಷ್ಕ್ರಿಯ ಮಾಡಲು ಅವಕಾಶವಿದೆ ಎಂದು ಟ್ರಾಯ್​ ಹೇಳಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!