Saturday, March 25, 2023

Latest Posts

BABY CARE | ಮಕ್ಕಳಿಗೆ ಎಷ್ಟು ಸಮಯದವರೆಗೆ ಸ್ತನಪಾನ ಮಾಡಿಸಬೇಕು? ಆರು ತಿಂಗಳು‌ ಸಾಕಾ? ಇಲ್ಲಿದೆ‌‌ ಮಾಹಿತಿ..

ಮಕ್ಕಳಿಗೆ ನಮ್ಮ ಥೀಕಾ ಗೋಲ್‌ಗಪ್ಪ, ಚಿಕನ್ ರೋಲ್ಸ್, ಚಾಕೋ ಡೋನಟ್, ಬಿರಿಯಾನಿ ಬಗ್ಗೆ ಗೊತ್ತಿರೋದಿಲ್ಲ, ಹುಟ್ಟಿದಾಗಿನಿಂದ ಆರು ತಿಂಗಳವರೆಗೂ ಅಮ್ಮನ ಹಾಲೇ ಮಕ್ಕಳಿಗೆ ಅಮೃತ.

ತಾಯಿಯ ಎದೆಹಾಲಿನಲ್ಲಿ ಅದೆಷ್ಟು ಶಕ್ತಿ ಇದೆ ಎಂದು ಊಹಿಸೋದು ಅಸಾಧ್ಯ, ಮಗುವಿನ ಪೋಷಣೆಗೆ ಬೇಕಾದ ಪ್ರತಿ ಅಂಶವೂ ತಾಯಿಯ ಹಾಲಿನಲ್ಲಿ ಇರುತ್ತದೆ.

ಕೆಲವರು ಆರು ತಿಂಗಳವರೆಗೆ ಸ್ತನಪಾನ ಮಾಡಿಸಿ ನಂತರ ರಾಗಿ ಸರಿಗೆ ಶಿಫ್ಟ್ ಆಗಿ ಬಿಡುತ್ತಾರೆ, ಸ್ತನಪಾನವನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಇದರಿಂದ ತಾಯಿ, ಮಗು ಇಬ್ಬರಿಗೂ ಸಮಸ್ಯೆ ತಪ್ಪಿದಲ್ಲ.

ಫಾರ್ಮುಲಾ ಹಾಲು ಕುಡಿಯುವ ಮಕ್ಕಳಿಗೂ, ತಾಯಿ ಹಾಲು ಕುಡಿದು ಬೆಳೆದ ಮಕ್ಕಳಿಗೂ ವ್ಯತ್ಯಾಸ ಇದ್ದದ್ದೆ. ಎದೆಹಾಲು ಕುಡಿದು ಬೆಳೆದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು.

ಸಾಮಾನ್ಯವಾಗಿ ವರ್ಷದ ನಂತರ ಸ್ತನಪಾನ ಮಾಡಿಸಿದರೆ ಮಕ್ಕಳು ಹಠ ಮಾಡ್ತಾರೆ, ಪಬ್ಲಿಕ್‌ನಲ್ಲಿ ಹಾಲಿಗೆ ಡಿಮ್ಯಾಂಡ್ ಮಾಡಿ ಮುಜುಗರ ತರಿಸ್ತಾರೆ, ನಿದ್ದೆ ಮಾಡೋಕೆ ಅಮ್ಮನೇ ಬೇಕು ಅಂತಾರೆ ಎನ್ನಲಾಗುತ್ತದೆ.

ಮಕ್ಕಳಿಗೆ ಎಷ್ಟು ವರ್ಷದವರೆಗೆ ಹಾಲು ಕೊಡಬಹುದು?
ಮೊದಲ ಆರು ತಿಂಗಳು ಹಾಲು ಬಿಟ್ಟು ಇನ್ನೇನನ್ನೂ ಕೊಡುವಂತಿಲ್ಲ, ಇನ್ನು ಎರಡು ಅಥವಾ ಮೂರು ವರ್ಷದವರೆಗೂ ಹಾಲು ಕುಡಿಸಿದರೆ ಒಳ್ಳೆಯದು.

ವರ್ಷದ ನಂತರ ಹಾಲಿನಲ್ಲಿ ಪೋಷಣೆ ಇರೋದಿಲ್ವಾ?
ಖಂಡಿತಾ ಇರುತ್ತದೆ, ವರ್ಷದ ನಂತರ ಹಾಲು, ಬರೀ ನೀರಷ್ಟೇ ಎನ್ನುತ್ತಾರೆ. ಆದರೆ ಹಾಲಿನಲ್ಲಿ ಮಕ್ಕಳಿಗೆ ಬೇಕಾದ ಎಲ್ಲ ಪೋಷಣೆ ಇರುತ್ತದೆ, ಈಗ ಸ್ತನಪಾನ ಮಾಡಿಸಿದಷ್ಟು ಸಮಯ ಮುಂದೆ ಆರೋಗ್ಯವಾಗಿ ಇರುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!