ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ RCB ಪ್ಲೇಆಫ್​ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಹೊಸದಿಗಂತ ಡಿಜಿಟಲ್ ಡೆಸ್ಕ್:

IPL ​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ 7 ಪಂದ್ಯಗಳನ್ನಾಡಿದೆ. ಈ ಮ್ಯಾಚ್​ಗಳಲ್ಲಿ ಆರ್​ಸಿಬಿ 4 ಜಯ ಸಾಧಿಸಿದರೆ, ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಮೂಲಕ ಒಟ್ಟು 8 ಅಂಕಗಳನ್ನು ಪಡೆದಿರುವ ಆರ್​ಸಿಬಿ ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಇದಾಗ್ಯೂ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡಕ್ಕೆ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ. ತವರು ಮೈದಾನದಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಬೆಂಗಳೂರು ಪಡೆ ಸೋತಿದೆ.

ಈ ಮೂರು ಸೋಲುಗಳೊಂದಿಗೆ ಮೊದಲಾರ್ಧ ಪೂರ್ಣಗೊಳಿಸಿರುವ ಆರ್​ಸಿಬಿ ಇದೀಗ ದ್ವಿತೀಯಾರ್ಧದ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಅದರಂತೆ ಆರ್​ಸಿಬಿ ತಂಡವು ದ್ವಿತೀಯಾರ್ಧದಲ್ಲಿ ಕಣಕ್ಕಿಳಿಯಲಿರುವ 7 ಪಂದ್ಯಗಳಲ್ಲಿ 4 ಜಯ ಸಾಧಿಸುವುದು ಅನಿವಾರ್ಯ. ಪ್ಲೇಆಫ್​ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು 16 ಅಂಕಗಳ ಅವಶ್ಯಕತೆಯಿದೆ. ವಿಶೇಷ ಎಂದರೆ ಎಂದರೆ ಆರ್​ಸಿಬಿ ತಂಡದ ಮುಂದಿನ 7 ಪಂದ್ಯಗಳಲ್ಲಿ 4 ಮ್ಯಾಚ್​ಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಬೇಕಿದೆ.

 

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!