ದಿನ ಉತ್ತಮವಾಗೋಕೆ ಈ ಕೆಲಸಗಳನ್ನು ಮಾಡ್ಬೇಕಂತೆ, ಇದರಲ್ಲಿ ನೀವು ಎಷ್ಟನ್ನು ಮಾಡ್ತೀರಾ?

ಎಲ್ಲರಿಗೆ ಎಲ್ಲ ದಿನವೂ ಉತ್ತಮವಾಗಿರೋದಿಲ್ಲ. ಕೆಲವೊಮ್ಮ ದಿನ ಎಲ್ಲಾ ಚೆನ್ನಾಗಿಯೇ ಇರುತ್ತದೆ. ಇನ್ನೇನು ಬೆಡ್‌ಗೆ ಹೋಗಬೇಕು ಎಂದಾಗ ಕೆಟ್ಟ ಸುದ್ದಿಯೊಂದನ್ನು ಕೇಳ್ತೀರಿ, ಇನ್ನು ದಿನ ಚೆನ್ನಾಗಿ ಆರಂಭಿಸೋಣ ಎಂದುಕೊಂಡಿರುತ್ತೀರಿ, ಪ್ರೀತಿಯಿಂದ ಮಾಡಿದ ಅಡುಗೆ ಸೀದು ಹೋಗಿ ಸಿಟ್ಟು ತರಿಸುತ್ತದೆ. ದಿನದಲ್ಲಿ ಎಲ್ಲವೂ ಇದ್ದದ್ದೇ, ನಿಮ್ಮ ದಿನ ಉತ್ತಮವಾಗೋಕೆ ಈ ರೀತಿ ಮಾಡಿ..

  • ಬೆಳಗ್ಗೆ ಎದ್ದು ಒಂದು ಕಪ್ ಕಾಫಿ ಕುಡಿಯಿರಿ, ಕೆಫೀನ್ ಎನರ್ಜಿ ನೀಡುತ್ತದೆ.
  • ಅಲಾರಂ ಇಟ್ಟ ಸಮಯಕ್ಕೇ ಎದ್ದೇಳಿ, ಬೆಳಗ್ಗೆ ಹೊರಗಿನ ಪ್ರಪಂಚ ಇನ್ನೂ ಸುಂದರವಾಗಿ ಕಾಣುತ್ತದೆ ನೋಡಿ.
  • ನಿಮ್ಮ ಸ್ನೇಹಿತರನ್ನು ನಗಿಸಿ, ಯಾರಾದರೂ ಒಬ್ಬರನ್ನಾದರೂ ನಗಿಸಿ ಖುಷಿಪಡಿ
  • ನ್ಯೂಸ್‌ಪೇಪರ್ ಓದಿ, ಜಗತ್ತಿನ ಹೊಸ ಆಯಾಮ ತಿಳಿದುಕೊಳ್ಳಿ
  • ನಿಮ್ಮ ಪ್ರೀತಿಪಾತ್ರರಿಗೆ ಒಂದಾದರೂ ಹಗ್ ನೀಡಿ
  • ಮನೆಯಲ್ಲಿ ಶುಚಿಗೊಳಿಸಿ, ಎಲ್ಲ ಆಗದಿದ್ದರೆ ಸ್ವಲ್ಪವಾದರೂ ಶುಚಿಗೊಳಿಸಿ
  • ಡೈರಿ ಅಥವಾ ಬ್ಲಾಗ್ ಬರೆಯಿರಿ, ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ
  • ಎದುರಿಗೆ ಬಂದ ಯಾರೋ ಅಪರಿಚಿತರೊಬ್ಬರನ್ನು ನೋಡಿ ನಕ್ಕುಬಿಡಿ, ಅವರು ನಗುತ್ತಾರೆ, ಇದು ನಿಮಗೆ ಖುಷಿ ನೀಡುತ್ತದೆ.
  • ವ್ಯಾಯಾಮ, ಜಿಮ್, ಯೋಗ ಅಥವಾ ವಾಕ್ ಮಾಡಿ
  • ಕೆಲವು ಹಳೆ ಫೋಟೊಗಳನ್ನು ನೋಡಿ, ಇದು ನಿಮ್ಮ ಖುಷಿ ದಿನಗಳನ್ನು ನೆನಪಿಸಿ ಇನ್ನಷ್ಟು ಎನರ್ಜಿ ನೀಡುತ್ತದೆ.
  • ನಿಮ್ಮಿಷ್ಟದ ಹಾಡುಗಳನ್ನು ಕೇಳೋದನ್ನು ಮರೆಯಬೇಡಿ.
  • ಅನಿಸಿದ್ದನ್ನು ಮಾಡಿಬಿಸಿ, ದಿನದಲ್ಲಿ ಯಾವುದಾದರೂ ಸಮಯದಲ್ಲಿ ಒಂದಾದರೂ ಕೆಲಸ ನಿಮ್ಮಿಷ್ಟದ್ದು ಮಾಡಿ
  • ಯಾರಿಗಾದರೂ ಸಹಾಯ ಮಾಡಿ, ದಿನದಲ್ಲಿ ಒಬ್ಬರಿಗಾದರೂ ನಿಮ್ಮಿಂದ ಸಹಾಯ ಆಗಲಿ
  • ಒಳ್ಳೆಯ ರುಚಿಯಾದ, ಆರೋಗ್ಯಕರ ಆಹಾರ ಸೇವನೆ ಮಾಡೋದು ಮರೆಯಬೇಡಿ
  • ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ಸ್ವಲ್ಪವಾದರೂ ಸಮಯ ನೀಡಿ.
  • ನಿಮ್ಮಿಷ್ಟದ ಬಟ್ಟೆ ಧರಿಸಿ ಖುಷಿ ಪಡಿ
  • ಮನಸ್ಸಿನಿಂದ, ಅಂತರಾಳದಿಂದ ದಿನದಲ್ಲಿ ಒಮ್ಮೆಯಾದರೂ ಮಾತನಾಡಿ.
  • ಪ್ರೀತಿಪಾತ್ರರ ಬಳಿ ಏನನ್ನಿಸುತ್ತಿದೆ ಇದ್ದಂತೆಯೇ ಹೇಳಿ. ಇದು ನಿಮ್ಮ ಅವರ ಬಾಂಧವ್ಯ ವೃದ್ಧಿಗೆ ಸಹಕಾರಿ
  • ನಿದ್ದೆಗೆ ಮೋಸ ಮಾಡಬೇಡಿ, ಮೊಬೈಲ್ ಎತ್ತಿಟ್ಟು ಪುಸ್ತಕ ಹಿಡಿದು ನಿದ್ದೆಗೆ ಜಾರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!