SURYAVAMSHAM | ಒಂದೇ ಫಿಲ್ಮ್ ಎಷ್ಟು ಬಾರಿ ಟೆಲಿಕಾಸ್ಟ್ ಮಾಡ್ತೀರಾ? ನಮ್ಮ ಮಾನಸಿಕ ಆರೋಗ್ಯ ಹಾಳಾದ್ರೆ ಏನ್ ಮಾಡ್ತೀರಾ? ಚಾನೆಲ್‌ಗೆ ವ್ಯಕ್ತಿ ಪತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಟ್ ಮ್ಯಾಕ್ಸ್ ಚಾನೆಲ್‌ನಲ್ಲಿ ಸೂರ್ಯವಂಶಂ ಸಿನಿಮಾ ಸಾಕಷ್ಟು ಬಾರಿ ಪ್ರಸಾರ ಮಾಡಿದ್ದಾರೆ.
ಕಾಪಿ ರೈಟ್ಸ್ ಪಡೆದ ಚಾನೆಲ್ ತಮಗೆ ಇಷ್ಟ ಬಂದಾಗಲೆಲ್ಲಾ ಸಿನಿಮಾ ಹಾಕುತ್ತಾರೆ. ಇದನ್ನು ಈಗಲೂ ಎಂಜಾಯ್ ಮಾಡೋರು ಇದ್ದಾರೆ. ಪ್ರತಿ ಬಾರಿ ಸಿನಿಮಾ ಬಂದಾಗಲೂ ಖುಷಿಯಿಂದ ಜನ ವೀಕ್ಷಿಸುತ್ತಾರೆ. ಇವರು ಒಂದು ವರ್ಗ. ಆದರೆ ಇನ್ನೊಂದು ವರ್ಗದ ಜನರಿದ್ದಾರೆ.

ಚಾನೆಲ್ ಹಾಕಿದಾಗಲೆಲ್ಲಾ ಅದೇ ಸಿನಿಮಾ? ನೋಡಿ ಬೇಜಾರಾಯ್ತು ಅಂತಾರೆ. ಈ ವರ್ಗದ ವ್ಯಕ್ತಿಯೊಬ್ಬ ಪೋಸ್ಟ್ ಒಂದನ್ನು ಮಾಡಿದ್ದು, ಸೂರ್ಯವಂಶಂ ಸಿನಿಮಾ ಪ್ರಸಾರದ ಹಕ್ಕು ನಿಮ್ಮ ಬಳಿ ಇದೆ, ಈಗಾಗಲೇ ಹೀರಾ ಸಿಂಗ್ ಕುಟುಂಬದ ಬಗ್ಗೆ ನಮಗೆ ಎಲ್ಲಾ ತಿಳಿದಾಗಿದೆ. ಇನ್ನೂ ಎಷ್ಟು ಬಾರಿ ಸಿನಿಮಾ ಟೆಲಿಕಾಸ್ಟ್ ಮಾಡ್ತೀರಿ? ಈಗಾಗಲೇ ಎಷ್ಟು ಬಾರಿ ಹಾಕಿದ್ದೀರಿ ಮಾಹಿತಿ ಕೊಡಿ. ನನ್ನ ಮಾನಸಿಕ ಆರೋಗ್ಯ ಹಾಳಾದ್ರೆ ಅದಕ್ಕೆ ಯಾರು ಹೊಣೆ ತಿಳಿಸಿ ಎಂದಿದ್ದಾರೆ. ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದ್ದು, ಸ್ವಲ್ಪ ಜನ ಇದನ್ನು ಒಪ್ಪಿದ್ದಾರೆ. ಹೌದು, ನಿಮ್ಮ ನೋವು ನಮಗೂ ಅರ್ಥ ಆಗುತ್ತದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!