ಮಾರ್ಚ್‌ ತಿಂಗಳಲ್ಲಿ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿದ್ದೆಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರ್ಥಿಕ ಅನಿಶ್ಚಿತತೆಗಳ ಕಾರಣದಿಂದ ಹೂಡಿಕೆ ಕ್ಷೇತ್ರದಲ್ಲಿ ನಿಧಾನಗತಿಯ ನಡುವೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FPI) ಮಾರ್ಚ್‌ ತಿಂಗಳಲ್ಲಿ ಇಲ್ಲಿಯವರೆಗೆ ಭಾರತೀಯ ಷೇರುಗಳಲ್ಲಿ 7,200 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಅದಾನಿ ಸಮೂಹದಲ್ಲಿ GQG ಪಾಲುದಾರರು ಬೃಹತ್‌ ಹೂಡಿಕೆ ಮಾಡಿದ ಪರಿಣಾಮ ಹಲವು ವಿದೇಶಿ ಹೂಡಿಕೆದಾರರು ಭಾರತದ ಷೇರುಗಳ ಕುರಿತು ಆಸಕ್ತಿ ತೋರಿದ್ದಾರೆ.

ಯುಎಸ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಒತ್ತಡ ಮತ್ತು ಬ್ಯಾಂಕಿಂಗ್ ಷೇರುಗಳಲ್ಲಿನ ಕುಸಿತದಿಂದಾಗಿ ಜಾಗತಿಕವಾಗಿ ಈಕ್ವಿಟಿ ಮಾರುಕಟ್ಟೆಗಳಲ್ಲಿ ಕುಸಿತದ ಭೀತಿ ಇರುವುದರಿಂದ ವಿದೇಶೀ ಹೂಡಿಕೆದಾರರು ತುಸು ಜಾಗರೂಕ ಹೆಜ್ಜೆಗಳನ್ನಿಡುವಂತೆ ತೋರುತ್ತಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ಹೇಳಿದ್ದಾರೆ.

ಲಭ್ಯವಿರೋ ಮಾಹಿತಯ ಪ್ರಕಾರ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐಗಳು) ಮಾರ್ಚ್ 25 ರವರೆಗೆ ಭಾರತೀಯ ಷೇರುಗಳಲ್ಲಿ 7,233 ಕೋಟಿ ರೂ. ಹೂಡಿಕೆ ಮಾಡಿದ್ದು ಫೆಬ್ರವರಿಯಲ್ಲಿ ರೂ 5,294 ಕೋಟಿ ಮತ್ತು ಜನವರಿಯಲ್ಲಿ ರೂ 28,852 ಕೋಟಿ ನಿವ್ವಳ ಹೊರಹರಿವಿನ ನಂತರ ಈ ಹೂಡಿಕೆಗಳು ನಡೆದಿವೆ. ವಲಯವಾರು ಅವಲೋಕಿಸುವುದಾದರೆ ಎಫ್‌ಪಿಐಗಳು ಯಂತ್ರೋಪಕರಣ, ಯಂತ್ರೋಪಕರಣ ಘಟಕಗಳು, ಹಣಕಾಸು ಸೇವೆಗಳು, ಲೋಹಗಳು ಮತ್ತು ಗಣಿಗಾರಿಕೆ ಮತ್ತು ಶಕ್ತಿಯಲ್ಲಿ ಖರೀದಿದಾರರಾಗಿದ್ದಾರೆ. ಐಟಿ ಕ್ಷೇತ್ರದ ಷೇರುಗಳಲ್ಲಿ ಎಫ್‌ಪಿಐಗಳು ನಿವ್ವಳ ಮಾರಾಟಗಾರರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!